ಬೆಂಗಳೂರು: ಕೇಂದ್ರ ವಿಭಾಗದ ಪೊಲೀಸರು ಪಬ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ಮುಂದುವರೆದಿದೆ.
ಅತಿಯಾದ ಡಿ.ಜೆ ಸೌಂಡ್ ಹಾಕಿ ಮೋಜು ಮಸ್ತಿ ಮಾಡ್ತಿದ್ದ ಪಬ್‌ಗಳಿಗೆ ಶಾಕ್ ನೀಡಿದ್ದಾರೆ. ಇದ್ರ ಜೊತೆಗೆ ಅಪ್ರಾಪ್ತರಿಗೆ ಪಬ್‌ಗೆ ಪ್ರವೇಶ ನೀಡಿ ಮದ್ಯ ಸರಬರಾಜು ಮಾಡ್ತಿದ್ರು ಈ ಹಿನ್ನೆಲೆ ಪೊಲೀಸ್ರು ದಾಳಿ ಮಾಡಿ ಪರಿಶೀಲನೆ ನಡೆಸಿದ್ರು. ನಗರದ ಬೋ ಟೈ, ಇಕಿಗೈ ಮತ್ತು ಸ್ಕೈ ಬಾರ್ ಮೇಲೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ದಾಳಿ ವೇಳೆ ನಿಯಮ ಉಲ್ಲಂಘನೆ ಮಾಡಿರೋದು ಬೆಳಕಿಗೆ ಬಂದಿದ್ದು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪಬ್ ಗಳ ಮೇಲೆ ನಿಯಮ ಉಲ್ಲಂಘನೆ ಕೇಸ್ ದಾಖಲಿಸಿದ್ದಾರೆ.
PublicNext
02/10/2022 02:41 pm