ಬೆಂಗಳೂರು- ಮತ್ತೆ ರಸ್ತೆ ಗುಂಡಿ ಮಿತಿ ಮೀರಿದ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿದ್ದಾರೆ. ಈಗಾಗಲೇ ಮೇ ತಿಂಗಳಿನಿಂದ ಈವರೆಗೆ 20 ಸಾವಿರ ಗುಂಡಿಯನ್ನ ಮುಚ್ಚಲಾಗಿದೆ. ಈಗಲೂ ಪ್ರತಿನಿತ್ಯ ಗುಂಡಿ ಗುರುತಿಸಿ ಮುಚ್ಚೋ ಕೆಲಸ ಮಾಡಲಾಗ್ತಿದೆ. ನಿರಂತರವಾಗಿ ಮಳೆಯಾಗ್ತಿದ್ದು, ಮಳೆಯಿಂದಾಗಿ ಗುಂಡಿಮುಚ್ಚೋಕೆ ಹಿನ್ನಡೆಯಾಗ್ತಿದೆ ಬ್ಯಾಚ್ ಮಿಕ್ಸ್ ಪ್ಲಾಂಟ್ ನಲ್ಲಿ ಮಳೆಯಿಂದಾಗಿ ತೊಂದರೆ ಆಗ್ತಿದೆ.
ಬದಲಾಗಿ ಕೋಲ್ಡ್ ಮಿಕ್ಸ್ ಅಳವಡಿಕೆಗೆ ಮುಂದಾಗ್ತಿದ್ದೀವಿ.ಇಂದು ನಾಳೆ 40 ಲೋಡ್ ಡಾಂಬರ್ ಮಿಕ್ಸ್ ವ್ಯವಸ್ಥೆ ಆಗ್ತಿದೆ. ಈಗಾಗಲೇ ಈ ಬಗ್ಗೆ ಸಭೆ ನಡೆಸಿ ಸೂಚಿಸಲಾಗ್ತಿದೆ. ವೆದರ್ ಸಪೋರ್ಟ್ ಮಾಡಿದ್ರೆ ಸಮರೋಪಾದಿಯಲ್ಲಿ ಗುಂಡಿಮುಚ್ಚೋ ಕಾರ್ಯವಾಗುತ್ತೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಇನ್ನೂ ಕಳೆದ 5 ವರ್ಷದಲ್ಲಿ 210 ಕೋಟಿ ಖರ್ಚಿನ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ್ದಾರೆ. ಪ್ರತೀ ವಾರ್ಡ್ ಗೆ 30 ಲಕ್ಷ ಮಾತ್ರ ಮೀಸಲಿಡಲಾಗಿದೆ.ವರ್ಷಕ್ಕೆ 26 ರಿಂದ 30 ಕೋಟಿ ಮಾತ್ರ ಪಾಟ್ ಹೋಲ್ಗೆ ಖರ್ಚಾಗುತ್ತೆ. ನೀವು ಯಾವ ಆಧಾರದಲ್ಲಿ 210 ಕೋಟಿ ಎಂದು ಹೇಳ್ತಿದ್ದೀರೋ ಗೊತ್ತಿಲ್ಲ. ವಾರ್ಡ್‌ಗಳಿಂದ ಈ ಬಗ್ಗೆ ಮಾಹಿತಿ ಪಡೆಯುವ ಕೆಲಸ ಮಾಡ್ತೀನಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
Kshetra Samachara
26/08/2022 02:22 pm