ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಬಿಬಿಎಂಪಿಯಿಂದ ಹೊಸ ಕರ ಸಂಗ್ರಹ ಬರೆ !

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಇನ್ಮುಂದೆ ಕಸಕ್ಕೆ ಸೆಸ್ ಜತೆಗೆ ಬಳಕೆದಾರರ ಶುಲ್ಕ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.

2019ರ ಆಗಸ್ಟ್ ನಲ್ಲಿ ಅನುಮೋದಿಸಿದ್ದ ನಿರ್ಣಯವನ್ನು ರಾಜ್ಯ ಸರ್ಕಾರ ಒಪ್ಪಿದೆ. ಕಸ ನಿರ್ವಹಣೆ ಉಪನಿಯಮ 2020 ರಾಜ್ಯಪತ್ರಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಕಸ ನಿರ್ವಹಣೆಗೆ ಶುಲ್ಕ ವಿಧಿಸಲು ಬಿಬಿಎಂಪಿಗೆ ನಿಯಮ ರೂಪಿಸಲು ತಿಳಿಸಲಾಗಿದೆ.

ಇಲ್ಲಿ ತನಕ ಕಸ ನಿರ್ವಹಣೆಗೆ ಶೇ. 5ರಷ್ಟು ಮಾತ್ರ ಉಪಕರವನ್ನು ಬಿಬಿಎಂಪಿ ಸಂಗ್ರಹಿಸುತ್ತಿತ್ತು. ಇನ್ಮುಂದೆ ಉತ್ಪಾದಿಸುವ ಕಸಕ್ಕೆ ತಕ್ಕಂತೆ ಬಳಕೆದಾರರ ಶುಲ್ಕ ವಿಧಿಸಲು ಮುಂದಾಗಿದೆ. ಈ ಬಗ್ಗೆ ಎನ್ ಜಿಟಿ ಕೋರ್ಟ್ ಕೂಡ ಸಂಗ್ರಹಕ್ಕೆ ಹಲವು ಬಾರಿ ಸೂಚನೆ ನೀಡಿದೆಯಂತೆ.

ಪ್ರತಿವರ್ಷ ಕಸ ನಿರ್ವಹಣೆಗೆ ಬಿಬಿಎಂಪಿ ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಆದರೆ, ಕರದ ರೂಪದಲ್ಲಿ ವಸೂಲಿ ಮಾಡುತ್ತಿದ್ದಿದ್ದು ಕೇವಲ 40 ಕೋಟಿ ಮಾತ್ರ. ಹೈ ಕೋರ್ಟ್ ನಲ್ಲೂ ಪಾಲಿಕೆ ಕ್ರಮಕ್ಕೆ ಅಸಮಾಧಾನ ವ್ಯಕ್ತವಾಗಿತ್ತು. ಹೊಸ ನಿಯಮದ ಪ್ರಕಾರ ಕಸ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಪ್ರತಿ ಮನೆಗಳಿಗೆ ತಿಂಗಳು ಇಂತಿಷ್ಟು ಹಣದಂತೆ ಸಂಗ್ರಹಿಸುವ ಚರ್ಚೆ ಪಾಲಿಕೆ ಅಧಿಕಾರಿಗಳು ಮಾಡುತ್ತಿದ್ದಾರೆ. ಪ್ರತಿ ಚದರ ಅಡಿಗೆ 2 ರೂ. ನಂತೆ ತಿಂಗಳು ಸಂಗ್ರಹಿಸುವ ಇರಾದೆ ಪಾಲಿಕೆಯದ್ದಾಗಿದೆ. ವಾಣಿಜ್ಯ ಕಟ್ಟಡಕ್ಕೆ ಬೇರೆ ಶುಲ್ಕ ನಿಗದಿ ಮಾಡಲಾಗಿದೆ.

1 ಸಾವಿರದ ಅಡಿ ವರೆಗೆ 50 ರೂ., 1-5 ಸಾವಿರ ಅಡಿ 100 ರೂ., 5 ಸಾವಿರ ಮೇಲ್ಪಟ್ಟು 300 ರೂ., ಕೈಗಾರಿಕಾ ಕಟ್ಟಡ: 1 ಸಾವಿರ ವರೆಗೆ 100 ರೂ.,1-5 ಸಾವಿರ 200 ರೂ., 5 ಸಾವಿರ ಮೇಲ್ಪಟ್ಟು 300., ಹೊಟೇಲ್- ಛತ್ರ, ಆಸ್ಪತ್ರೆ: 10 ಸಾವಿರ ಚದರಡಿ 300 ರೂ.,10-50 ಸಾವಿರ 500 ರೂ., 50 ಸಾವಿರ ಮೇಲ್ಪಟ್ಟು 600 ರೂ.

ಬಳಕೆದಾರರ ಕರ ಹೇಗೆ ವಿಧಿಸಬೇಕೆಂದು ಇನ್ನೂ ಪಾಲಿಕೆ ನಿರ್ಧರಿಸಿಲ್ಲ. ಆಸ್ತಿ ತೆರಿಗೆ ಪಾವತಿಸುವಾಗ ಸಂಗ್ರಹಿಸಬೇಕೇ ಎಂಬ ಚಿಂತನೆಯಲ್ಲಿದೆ. ಬಳಕೆದಾರರ ಶುಲ್ಕ ವಿಧಿಸುವುದರಿಂದ ʼಸ್ವಚ್ಛ ಭಾರತ್ʼ ಗೆ ಸಹಾಯವಾಗಲಿದೆ.

ವರದಿ: ಗಣೇಶ್ ಹೆಗಡೆ

Edited By : Somashekar
PublicNext

PublicNext

01/07/2022 04:14 pm

Cinque Terre

46.45 K

Cinque Terre

0

ಸಂಬಂಧಿತ ಸುದ್ದಿ