ಬೆಂಗಳೂರು: ನಗರದಲ್ಲಿ ಅತಿಹೆಚ್ಚು ವಾಹನ ಸಂಚಾರ ಆಗೋದು ಶೇಷಾದ್ರಿ ರಸ್ತೆಯಲ್ಲಿ ಏ.4 ರಿಂದ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಲಿದೆ. ಈ ಸಂಬಂಧ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ.
ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಲಿದ್ದು, ಮೂರು ತಿಂಗಳ ಕಾಲ ಟ್ರಾಫಿಕ್ ಕಿರಿ - ಕಿರಿ ಉಂಟಾಗಲಿದೆ. ಪಾಲಿಕೆ ವೈಟ್ ಟಾಪಿಂಗ್ ಫೇಸ್ -೨ ವಿಭಾಗದ ಪ್ಯಾಕೇಜ್ 2ರ ಅಡಿಯಲ್ಲಿ ಒಟ್ಟು 15 ಕೋಟಿ ರೂ ವೆಚ್ಚದಲ್ಲಿ ಆರ್ .ಸುಬ್ಬಣ್ಣ ವೃತ್ತದಿಂದ ಕೆ.ಆರ್ ವೃತ್ತದ ವರೆಗೆ 1.4 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತದೆ.
ಐದು ಹಂತಗಳಲ್ಲಿ ಕಾಮಗಾರಿ ನಡೆಯಲಿದೆ. ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜನಿಯರ್ ಎಂ.ಲೋಕೇಶ್ ತಿಳಿಸಿದ್ದಾರೆ.
Kshetra Samachara
28/03/2022 06:13 pm