ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಯಲ್ಲೇ ಟ್ರಾನ್ಸ್‌ಫಾರ್ಮರ್ ಬದಲಾಯಿಸಿದ ಪವರ್ ಮ್ಯಾನ್‌ಗಳು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಭುವನೇಶ್ವರ ನಗರದಲ್ಲಿ ಕೆಟ್ಟು ಹೋಗಿದ್ದ ಟ್ರಾನ್ಸ್‌ಫಾರ್ಮರ್ ಮಾಡಿ ನಂತರ ಸುರಿಯುವ ಮಳೆಯಲ್ಲೇ ಟ್ರಾನ್ಸ್‌ಫಾರ್ಮರ್ ಬದಲಾಯಿಸಿ ಬೆಳಕು ನೀಡಿದ್ದಾರೆ. ಪವರ್ ಮ್ಯಾನ್‌ಗಳ ಸೇವಾ ನಿಷ್ಠೆಯನ್ನು ಜನರು ಶ್ಲಾಘಿಸಿದ್ದಾರೆ.

ವಿದ್ಯುತ್ ಸರಬರಾಜು ಮಾಡುವ 100 ಕೆವಿ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ನಿನ್ನೆ (ಗುರುವಾರ) ಬೆಳಗ್ಗೆ ಕೆಟ್ಟು ಹೋಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಸಾರ್ವಜನಿಕರು ದೂರು ಬಂದ ಹಿನ್ನಲೆ ಪವರ್ ಮ್ಯಾನ್‌ಗಳಾದ ವೆಂಕಟಚಲ ಮತ್ತು ರಾಜಣ್ಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಟ್ರಾನ್ಸ್‌ಫಾರ್ಮರ್ ಕೆಟ್ಟುಹೋಗಿರುವುದು ಗಮನಕ್ಕೆ ಬಂದ ನಂತರ ದುರಸ್ತಿ ಕಾರ್ಯ ಆರಂಭಿಸಿದ್ದರು. ಈ ವೇಳೆ ಮಳೆ ಆರಂಭವಾಗಿದ್ದು, ಇದರ ನಡುವೆಯೇ ಪವರ್ ಮ್ಯಾನ್‌ಗಳು ಟ್ರಾನ್ಸ್‌ಫಾರ್ಮರ್ ಜೋಡಿಸಿ ಭುವನೇಶ್ವರ ನಗರಕ್ಕೆ ಬೆಳಕು ನೀಡಿದ್ದಾರೆ.

ಈ ಕೆಲಸವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಪವರ್ ಮ್ಯಾನ್‌ಗಳ ಕೆಲಸವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

Edited By :
PublicNext

PublicNext

05/08/2022 11:09 am

Cinque Terre

35.06 K

Cinque Terre

2

ಸಂಬಂಧಿತ ಸುದ್ದಿ