ಬೆಂಗಳೂರು : ತಿಮ್ಮಪ್ಪನ ದರ್ಶನ ನಾವು ಮಾಡಬೇಕಾದರೆ ಇನ್ನಮೇಲೆ ತಿರುಪತಿಗೆ ಹೋಗಬೇಕೆಂದೇನಿಲ್ಲ ಯಾಕೆಂದರೆ ತಿರುಪತಿ ತಿಮ್ಮಪ್ಪನ ದರ್ಶನವನ್ನು ಇನ್ಮುಂದೆ ಬೆಂಗಳೂರಿನಲ್ಲೇ ಪಡೆಯಬಹುದು.
ಎಲ್ಲಿ ಅಂತ ಅಂದ್ಕೊಂಡ್ರಾ ಹಾಗಿದ್ರೆ ಈ ಸ್ಟೋರಿನಾ ನೋಡಿ
ಸಾಕ್ಷಾತ್ ತಿರುಪತಿ ತಿಮ್ಮಪ್ಪ ಈಗ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ದೊಡ್ಡಕಲ್ಲಸಂದ್ರ ದಲ್ಲಿರುವ ವೈಕುಂಠ ಬೆಟ್ಟದಲ್ಲಿ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದಾನೆ.
ಹೌದು ತಿರುಪತಿ ತಿರುಮಲ ದೇವಸ್ಥಾನದ ರೀತಿಯಲ್ಲಿ ಇಸ್ಕಾನ್ ಈಗ ಶ್ರೀ ರಾಜ ರಾಜೇಂದ್ರ ಗೋವಿಂದ ದೇವಸ್ಥಾನ ಕಟ್ಟಿದ್ದಾರೆ.ತಿರುಪತಿ ಮಾದರಿಯಲ್ಲೇ 7 ಬಾಗಿಲು ಇರುವ ದೇವಸ್ಥಾನವಿದು.
7 ಬಾಗಿಲು ದಾಟಿ ತಿಮ್ಮಪ್ಪನ ದರ್ಶನ ಪಡೆಯಬಹುದು. ವಜ್ರವೈಡೂರ್ಯದಿಂದ ಅಲಂಕಾರಗೊಂಡು ಸಾಕ್ಷಾತ್ ತಿರುಪತಿ ತಿಮ್ಮಪ್ಪ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದಾನೆ. ಬೆಟ್ಟದ ಮೇಲೆ ಕುಳಿತಿರುವ ಗೋವಿಂದನ ದರ್ಶನ ಪಡೆದು ಬಂದ ಭಕ್ತಾದಿಗಳು ಏನ್ ಹೇಳ್ತಾರೆ ಕೇಳೋಣ ಬನ್ನಿ.
Kshetra Samachara
15/06/2022 07:42 pm