ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆರೆಗೆ ವಿಷಪ್ರಾಶನ: ಬಯೋ ಕೆಮಿಕಲ್ ಮಾಫಿಯ ಜಾಡು ಬೆನ್ನತ್ತಿದ್ದ ಗ್ರಾಮಸ್ಥರು

ಯಲಹಂಕ: ಹೀಗೆ ಜುಳು ಜುಳು ಹರಿವ ನೀರು ದಶಕಗಳಿಂದ ಸುತ್ತ ಮುತ್ತ ಗ್ರಾಮದ ಜೀವನಾಡಿ. ಆದ್ರೀಗ ಅದ್ರ ಪಕ್ಕ ನಿಂತ್ರೆ ಜೀವ ಹೋಗುವ ಭಯದಲ್ಲಿದ್ದಾರೆ ಗ್ರಾಮಸ್ಥರು. ಕೊಳೆತು ನಾರ್ತಿರೋ ನೀರು, ಗಾಳಿ ಬಂದ್ರೆ ಮೈ ಮೇಲೆ ಬರೋ ವಿಷಪೂರಿತ ನೊರೆ ಇದಕ್ಕೆಲ್ಲ ಕಾರಣ ಬಯೋ ಕೆಮಿಕಲ್ ಮಾಫಿಯಾ..

ಹೌದು ಈ ಬಯೋ ಕೆಮಿಕಲ್ ಮಾಫಿಯ ಅದೆಷ್ಟೋ‌ ಜನರಿಗೆ ಗೊತ್ತಿಲ್ಲ. ಕಾರ್ಖಾನೆಗಳು, ಮತ್ತು ಬಯೋ ಕೆಮಿಕಲ್ ನಿಂದು ಉತ್ಪಾದನೆಯಾಗೋ ಈ ಕೆಮಿಕಲ್ ನೀರನ್ನ ಕಾರ್ಖಾನೆ ಘಟಕದಲ್ಲೇ ಗುಂಡಿ ತೆಗೆದು ಭೂಮಿಯಲ್ಲೇ ಇಂಗಿಸಬೇಕು. ಇದಕ್ಕೆಲ್ಲ ಸಾಕಷ್ಟು ಟೈಂ ಮತ್ತು ಹಣ ಎರಡೂ ಖರ್ಚಾಗುತ್ತೆ. ಇದೇ ಕಾರಣಕ್ಕೆ ಟ್ಯಾಂಕರ್ ಗಳಲ್ಲಿ ತುಂಬಿಸಿ, ಕೆರೆ, ಕಾಲುವೆ ನಾಲೆಗೆ ಈ ಕೆಮಿಕಲ್ ನೀರನ್ನು ಅನಧಿಕೃತವಾಗಿ ಬಿಡಲಾಗ್ತಿದೆ. ಇದ್ರ ಹಿಂದೆ ದೊಡ್ಡ ದೊಡ್ಡ ಕಂಪನಿ ಮತ್ತು ವ್ಯಕ್ತಿಗಳ ಕೈವಾಡವಿದೆ.

ಇಂತಹದ್ದೆ ದೊಡ್ಡ ಕಂಪನಿಯಿಂದ ತಂದ ಬಯೋ ಕೆಮಿಕಲ್ ನ ರಾತ್ರೋ ರಾತ್ರಿ ಕೆರೆ ಕಾಲುವೆಗೆ ಬಿಡುವಾಗ ಮಾಚೋಹಳ್ಳಿ ಗ್ರಾಮಸ್ಥರು ಕೆಮಿಕಲ್ ಸಮೇತ ಆರೋಪಿಗಳನ್ನ ಲಾಕ್ ಮಾಡಿದ್ದಾರೆ. ಮಾಚೋಹಳ್ಳಿ ಕೆರೆ ಕೋಡಿಗೆ ಲಾರಿ ನಿಲ್ಲಿಸಿ ಪೈಪ್ ಮೂಲಕ ನಿತ್ಯ ಟ್ಯಾಂಕರ್ ನಲ್ಲಿ ತಂದು ಅನಧಿಕೃತವಾಗಿ ಡಂಪ್‌ ಮಾಡ್ತಿದ್ರು.‌ ಇದ್ರಿಂದ ರಸ್ತೆಯುದ್ದಕ್ಕೂ ಉರಿ ತುಂಬಿದ ಕೆಟ್ಟ ವಾಸನೆ ಹಬ್ಬಿತ್ತು. ಇದ್ರಿಂದ ಗ್ರಾಮಸ್ಥರೇ ಕಾದು ರೆಡ್ ಹ್ಯಾಂಡ್ ಆಗಿ ಲಾರಿಯನ್ನ ಲಾಕ್ ಮಾಡಿದ್ದಾರೆ.

ಇನ್ನೂ ಈ ಕೆಮಿಕಲ್ ಡಂಪ್ ಬಗ್ಗೆ ಈ ಹಿಂದೆಯೇ ಗ್ರಾಮಸ್ಥರು ಪೊಲೀಸರು ಮತ್ತು ಶಾಸಕರಿಗೆ ಮಾಹಿತಿ ನೀಡಿ ದೂರು ಸಲ್ಲಿಸಿದ್ರು. ಅದ್ರಂತೆ ನಿನ್ನೆ ರಾತ್ರಿ ಗ್ರಾಮಸ್ಥರೇ ವಿಷಜಂತುಗಳನ್ನ ಹಿಡಿದು ಮಾದನಾಯಕನಹಳ್ಳಿ ಪೊಲೀಸ್ರಿಗೆ ಒಪ್ಪಿಸಿದ್ದಾರೆ.‌ ಸದ್ಯ ಈ ಕುರಿತು ಪ್ರಕರಣ ಕೂಡ ದಾಖಲಾಗಿದೆ.ಲಾರಿಯನ್ನ ಲಾಕ್ ಮಾಡ್ತಿದ್ದಂತೆ ಒಬ್ಬ ಆರೋಪಿ ಎಸ್ಕೇಪ್ ಆಗಿದ್ದು ಮತ್ತೊಬ್ಬ ಲಾಕ್ ಆಗಿದ್ದಾನೆ.

ಒಟ್ಟಿನಲ್ಲಿ ಈ ಬಯೋ ಕೆಮಿಕಲ್ ನಿಂದ ಸಂಪೂರ್ಣ ಮಾಚೋಹಳ್ಳಿ ,ಕಾಚೋಹಳ್ಳಿ ಕೆರೆ ನೀರು ಸಂಪೂರ್ಣವಾಗಿ ಕಲುಷಿತವಾಗಿದ್ದು ವಿಷಪೂರಿತ ನೊರೆ ಉಲ್ಬಣವಾಗಿದೆ. ಇದ್ರಿಂದ ಜಲಚರ ಮತ್ತು ಜಾನುವಾರುಗಳ ಜೀವಕ್ಕೂ ಕುತ್ತು ಬಂದಿದೆ. ಇನ್ನು ಕೇವಲ ಒಂದು ಟ್ಯಾಂಕರ್ ಅಷ್ಟೇ ಲಾಕ್ ಆಗಿದ್ದು ಇಂಥಹ ಹತ್ತಾರು ಟ್ಯಾಂಕರ್ ಗಳು ನಿತ್ಯ ಕಾಲುವೆ ಮೂಲಕ ಕೆರೆಗಳಿಗೆ ವಿಷ ಉಣಿಸುತ್ತಿವೆ.‌ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು.

ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

30/04/2022 01:59 pm

Cinque Terre

32.97 K

Cinque Terre

0

ಸಂಬಂಧಿತ ಸುದ್ದಿ