ವರದಿ: ಗೀತಾಂಜಲಿ
ಬೆಂಗಳೂರು: ಆಷಾಢಮಾಸದ ಅಂಗವಾಗಿ ತರಕಾರಿಗಳ ದರದಲ್ಲಿ ಸ್ವಲ್ಪ ಇಳಿಕೆಯಾಗಿರುವುದು ಗ್ರಾಹಕರಿಗೆ ಕೊಂಚ ಸಮಾಧಾನ ತಂದಿದೆ. ಹಸಿ ಮೆಣಸಿನಕಾಯಿ, ಬೀನ್ಸ್, ಟೊಮೇಟೊ ಮತ್ತಿತರ ತರಕಾರಿಗಳ ದರ ಗಗನಕ್ಕೇರಿದ್ದವು.
ಇದೀಗ ಎಲ್ಲೆಡೆ ಮಳೆ ಬಿದ್ದಿರುವುದರಿಂದ ಸೊಪ್ಪು-ತರಕಾರಿಗಳ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ಜೊತೆಗೆ ಆಷಾಢ ಮಾಸ ಬಂದಿರುವುದರಿಂದ ಶುಭಕಾರ್ಯಗಳು ನಡೆಯುತ್ತಿಲ್ಲ. ಹೀಗಾಗಿ ಬೇಡಿಕೆಯೂ ಹೆಚ್ಚೇನೂ ಇಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಹಲವು ತರಕಾರಿಗಳ ದರ ಇದೀಗ ಶೇ.60ರಷ್ಟು ಇಳಿಕೆಯಾಗಿದೆ.
Kshetra Samachara
16/07/2022 02:03 pm