ದೊಡ್ಡಬಳ್ಳಾಪುರ: ಹೆರಿಗೆ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯತೆಯಿಂದ ತಾಯಿ ಸಾವನ್ನಪ್ಪಿದ್ದಾರೆಂದು ಮೃತಳ ಕುಟುಂಬಸ್ಥರು ಆರೋಪ ಮಾಡಿದ್ದು, ಹುಟ್ಟುವ ಮುನ್ನವೇ ತಾಯಿ ಕಳೆದುಕೊಂಡ ಶಿಶು ಅನಾಥವಾದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಹೌದು ದೊಡ್ಡಬಳ್ಳಾಪುರ ತಾಲೂಕಿನ ಬೈರಾಪುರ ಗ್ರಾಮದ 23 ವರ್ಷದ ಸವಿತಾ ಹೆರಿಗೆಗೆಂದು ದೊಡ್ಡಬಳ್ಳಾಪೂರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ಹೆರಿಗೆ ವೇಳೆ ಮಹಿಳೆ ಆಧಿಕ ರಕ್ತಸ್ರಾವದಿಂದ ಮಗು ಜನಿಸುತ್ತಿದ್ದಂತೆ ಸಾವನ್ನಪ್ಪಿದ್ದಾಳೆ.
ಈ ಸಾವಿಗೆ ವೈದ್ಯರ ನಿರ್ಲಕ್ಷ್ಯತೆಯೇ ಕಾರಣವೆಂದು ಮೃತ ಸವಿತಾ ಪಾಲಕರು ಆಕ್ರೋಶಗೊಂಡು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
ಎರಡು ವರ್ಷಗಳ ಹಿಂದೆ ಬೈರಾಪುರದ ರಮೇಶ್ ಎಂಬುವವರನ್ನು ಮದುವೆಯಾಗಿದ್ದ ಸವಿತಾ ಚೊಚ್ಚಲ ಗರ್ಭಿಣಿಯಾಗಿದ್ದಳು ಆಕೆಯನ್ನು ರೆಗ್ಯೂಲರ್ ಚೆಕ್ ಆಪ್ ಅನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸಲಾಗಿತ್ತು. ಇಂದು ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರದ ತಾಯಿ ಮಗು ಆಸ್ಪತ್ರೆಗೆ ದಾಖಲು ಮಾಡಲಾಯಿತು.
ತಾಯಿ ಹೊಟ್ಟೆಯಲ್ಲಿದ್ದ ಮಗು 4 ಕೆಜಿಗೂ ಆಧಿಕ ತೂಕ ಇದರಿಂದ ಸಹಜ ಹೆರಿಗೆ ಅಸಾಧ್ಯವಾಗಿತ್ತು, ಆದರೆ ವೈದ್ಯರು ಸಹಜ ಹೆರಿಗೆ ಆಗುತ್ತೆ ಎಂದು ಇಲ್ಲಿಯೇ ಉಳಿಸಿಕೊಂಡಿದ್ದಾರೆ, ಬೆಳಗ್ಗೆ 9 ಗಂಟೆ ಸಮಯದಲ್ಲಿ ಹೆರಿಗೆಯಾದ ನಂತರ ಗರ್ಭಕೋಶದಲ್ಲಿ ತೀರ್ವ ರಕ್ತಸ್ರಾವ ಆಗಿ ಆರೋಗ್ಯದಲ್ಲಿ ಏರುಪೇರಾಗಿದೆ, ವೈದ್ಯರು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಇತ್ತ ಬೇರೆ ಆಸ್ಪತ್ರೆಗೆ ಹೋಗುವ ಮುನ್ನವೇ ದಾರಿ ಮಧ್ಯೆ ಸವಿತಾ ಸಾವನ್ನಪ್ಪಿದ್ದಾಳೆ.
ಸದ್ಯ ವೈದ್ಯರ ನಿರ್ಲಕ್ಷ್ಯತೆಯೇ ಸವಿತಾಳ ಸಾವಿಗೆ ಕಾರಣರೆಂದು ಪೋಷಕರು ಪ್ರತಿಭಟನೆ ನಡೆಸಿದರು, ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನ ಹತೋಟಿಗೆ ತಂದರು.
PublicNext
10/03/2022 11:02 pm