ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ : ವಾಕ್ಸಿನ್ ಪಡೆಯದಿದ್ದರೂ ಸರ್ಟಿಫಿಕೇಟ್ : ದೇವನಹಳ್ಳಿಯ ಜಿಲ್ಲಾಡಳಿತದ ಎಡವಟ್ಟು

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆರೋಗ್ಯ ಸಚಿವ ಸುಧಾಕರ್ ಉಸ್ತುವಾರಿಯಾಗಿ ಬಂದ ನಂತರ ಒಂದಷ್ಟು ಬದಲಾವಣೆ ಆಗುತ್ತಿವೆ.

ಬೆಂಗಳೂರು ಗ್ರಾಮಾಂತರವನ್ನು ಸಂಪೂರ್ಣ ವ್ಯಾಕ್ಸಿನೇಟೆಡ್ ಜಿಲ್ಲೆ ಎಂದು ಘೋಷಿಸುವ ಭರದಲ್ಲಿ ಎಡವಟ್ಟುಗಳಾಗುತ್ತಿವೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ರಾಜ್ಯ ಆರೋಗ್ಯ ಸಚಿವರೆ ಉತ್ತರಿಸಬೇಕಿದೆ..!

ಸೆಕೆಂಡ್ ಡೋಸ್ ವ್ಯಾಕ್ಸಿನ್ ತೆಗೆದುಕೊಂಡಿಲ್ಲವಾದರೂ ದೇವನಹಳ್ಳಿ ತಾಲೂಕಿನ ಅನೇಕ ಕಡೆ ಜನರ ಮೊಬೈಲ್ ಗಳಿಗೆ ಸಕ್ಸಸ್ ಫುಲ್ ಡೊಸ್ ಮೆಸೇಜಸ್ ಬರ್ತಿದೆ.

ಇನ್ನು ಸರ್ಟಿಫಿಕೇಟ್ ಸಮೇತ ಸಾರ್ವಜನಿಕರ ಮೊಬೈಲ್ ಗೆ ಮೆಸೇಜಸ್ ಬರುತ್ತಿವೆ. ಸದ್ಯ ಜಿಲ್ಲಾ ಆರೋಗ್ಯ ಇಲಾಖೆ ಮಹಾಎಡವಟ್ಟಿನಿಂದ ಸಾರ್ವಜನಿಕರು ಪೇಚಿಗೆ ಸಿಲುಕಿದ್ದಾರೆ.

ದೇವನಹಳ್ಳಿಯ ಸುಮಾರು 5 ಜನರಿಗೆ ಈ ರೀತಿಯ ಸೇಮ್ ಟು ಸೇಮ್ ಮೆಸೇಜ್ ಬಂದಿವೆ.

ಡಾ.ಸುಧಾಕರ್ ರವರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜ್ಯದಲ್ಲೆ ಎರಡೂ ಡೋಸ್ ಲಸಿಕೆ ಪಡೆದ ಮೊದಲ ಜಿಲ್ಲೆ ಎಂದು ಟ್ವೀಟ್ ಮಾಡಿದ್ದಾರೆ.

ಇವೆಲ್ಲಾ ಬೆಳವಣಿಗೆ ಅನೇಕ ಸಂಶಯಗಳಿಗೆ ಕಾರಣ ಆಗ್ತಿವೆ.

Edited By : Shivu K
PublicNext

PublicNext

02/02/2022 07:18 pm

Cinque Terre

37.55 K

Cinque Terre

6

ಸಂಬಂಧಿತ ಸುದ್ದಿ