ಯಲಹಂಕ: ಆರೋಗ್ಯ ಕಾಯಬೇಕಿದ್ದ ಯಲಹಂಕ ಸರ್ಕಾರಿ ಆಸ್ಪತ್ರೆಗೇ 'ಚೀನಿ ಹೆಮ್ಮಾರಿ' ವಕ್ಕರಿಸಿದೆ. 3 ಡಾಕ್ಟರ್ಸ್, 8 ನರ್ಸ್, 9 ಸಿಬ್ಬಂದಿ, 6 ನಾನ್ ಕ್ಲಿನಿಕ್ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ!
ಯಲಹಂಕ ಸಾರ್ವಜನಿಕ ಆಸ್ಪತ್ರೆಗೆ ಪ್ರತಿದಿನ ಸಾವಿರಾರು ಜನ ಒಳ- ಹೊರ ರೋಗಿಗಳು ಬಂದು ಹೋಗ್ತಾರೆ. ಇದೀಗ ಕೊರೊನಾ ಬಂದಿರುವುದರಿಂದ ಕಳೆದೆರಡು ದಿನಗಳಿಂದ ಆಸ್ಪತ್ರೆಗೆ ಚಿಕಿತ್ಸೆ, ಟೆಸ್ಟ್ ಗಳಿಗೆ ಭೇಟಿ ಕೊಟ್ಟಿದ್ದ ಜನರಲ್ಲಿ ಆತಂಕ ಮನೆ ಮಾಡಿದೆ.
ಪ್ರತಿದಿನ ನೂರು ಜನ ಕೊರೊನಾ ಟೆಸ್ಟ್ ಗಾಗಿ ಈ ಆಸ್ಪತ್ರೆಗೆ ಬಂದರೆ, ಅವರಲ್ಲಿ 40 ಮಂದಿಗೆ ಪಾಸಿಟಿವ್ ಬರ್ತಿದೆ!
ಪ್ರಸ್ತುತ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ 110ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಇವರಲ್ಲಿ 14 ಡಾಕ್ಟರ್ಸ್, 30 ನರ್ಸ್ ಗಳು, 20 ಡಿ-ಗ್ರೂಪ್ ನೌಕರರು, 14 ನಾನ್ ಕ್ಲಿನಿಕ್ ಸಿಬ್ಬಂದಿ, 10 ಕಚೇರಿ ಸಿಬ್ಬಂದಿ, APRKಯ 5 ಸಿಬ್ಬಂದಿ, 8 ಜನ ಲ್ಯಾಬ್ ಸಿಬ್ಬಂದಿ, ಇಬ್ಬರು X ಸಿಬ್ಬಂದಿ ಸೇರಿ 110ಕ್ಕೂ ಹೆಚ್ಚು ಜನ ಕೆಲಸ ಮಾಡ್ತಿದ್ದಾರೆ.
ಈ ಸರ್ಕಾರಿ ಆಸ್ಪತ್ರೆಗೆ ಯಲಹಂಕ ತಾಲೂಕು, ಬೆಂಗಳೂರು, ದೇವನಹಳ್ಳಿ, ದೊಡ್ಡಬಳ್ಳಾಪುರ ಸುತ್ತಮುತ್ತ ಜನರು ಚಿಕಿತ್ಸೆಗೆ ಬರ್ತಾರೆ. ಕೊರೊನಾ ಮೊದಲ ಮತ್ತು 2ನೇ ಅಲೆ ವೇಳೆ ವೆಂಟಿಲೇಟರ್ಸ್, ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ, ಎಮರ್ಜೆನ್ಸಿ ಐಸಿಯು ಬೆಡ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೀಗ ವೈದ್ಯರು ಸೇರಿ ಸಿಬ್ಬಂದಿಗೆ ಕೊರೊನಾ ಬಂದಿರುವುದರಿಂದ ಯಲಹಂಕ ಸುತ್ತಮುತ್ತಲ ಜನ ಭಯಗೊಂಡಿದ್ದಾರೆ.
ಇನ್ನು ಯಲಹಂಕ ಬಿಬಿಎಂಪಿ ವಲಯದ 11 ವಾರ್ಡ್ ಗಳಲ್ಲಿ ಒಂದೇ ದಿನ 2010 ಕೇಸ್ ಗಳು ದಾಖಲಾಗಿವೆ. 1ರಿಂದ 18 ವರ್ಷ ವಯಸ್ಸಿನ 210 ಮಕ್ಕಳಿಗೆ ಕೊರೊನಾ ವಕ್ಕರಿಸಿದೆ. ಓರ್ವ ಮೃತಪಟ್ಟಿದ್ದರೆ, ಯಾವುದೇ ಒಮಿಕ್ರಾನ್ ಕೇಸ್ ದಾಖಲಾಗಿಲ್ಲ.
PublicNext
20/01/2022 10:14 pm