ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಳಿಗಾಲದಲ್ಲಿ ಹೆಚ್ಚುತ್ತಿದೆ ಹಾರ್ಟ್ ಅಟ್ಯಾಕ್ ಪ್ರಕರಣ!- "ಹೃದಯ ಜೋಪಾನ"

ಬೆಂಗಳೂರು: ಚಳಿಗಾಲಕ್ಕೆ ಬೆಂಗಳೂರಿನಲ್ಲಿ ಹೃದಯಾಘಾತ ಪ್ರಕರಣ ಡಬಲ್ ಆಗ್ತಿದ್ಯಂತೆ. ಚಳಿಗೆ ರಕ್ತ ಹೆಪ್ಪುಗಟ್ಟಿ ಹೃದಯಾಘಾತ ಸಂಭವಿಸುತ್ತಿದೆ. ಹೆಚ್ಚು ಚಳಿಯಲ್ಲಿ ಇರದಂತೆ ಜಯದೇವ ಆಸ್ಪತ್ರೆ ವೈದ್ಯರ ಎಚ್ಚರಿಕೆ ರವಾನೆ ಆಗಿದೆ. ಜಯದೇವ ಆಸ್ಪತ್ರೆ ಸೇರಿ ನಗರದ ಆಸ್ಪತ್ರೆಗಳಲ್ಲಿ ಹೆಚ್ಚಳ ಕಂಡ ಹಾರ್ಟ್ ಅಟ್ಯಾಕ್ ಕೇಸ್ ಡಬಲ್ ಆಗ್ತಿದೆ.

ಹಾಗಿದ್ರೆ ಏನ್ ಮಾಡ್ಬೇಕು? ಏನ್ ಮಾಡಬಾರದು? ಅಂತ ನೋಡೋದಾದ್ರೆ ಕೊರೆವ ಚಳಿಗೆ ಮಾರ್ನಿಂಗ್ ವಾಕ್ ಮಾಡದಂತೆ ಸಲಹೆ ನೀಡಿದ್ದಾರೆ. ಹಿರಿಯರು ಸ್ವಲ್ಪ ಎಚ್ಚರಿಕೆ ವಹಿಸಲು ತಜ್ಞ ವೈದ್ಯರು ತಿಳಿಸಿದ್ದಾರೆ. ಆದಷ್ಟು ಮನೆಯಲ್ಲಿಯೇ ವಾಕಿಂಗ್, ಎಕ್ಸೈಸ್ ಮಾಡಲು ಸಲಹೆ ಕೊಟ್ಟಿದ್ದು, ಕೊರೆವ ಚಳಿಗೆ ಹೆಚ್ಚು ಅಪಧಮನಿಗಳು ಕುಗ್ಗುವ ಸಾಧ್ಯತೆ ಇದೆ ಅಂತ ಎಚ್ಚರಿಸಿದ್ದಾರೆ.

ಇದರಿಂದ ರಕ್ತದೊತ್ತಡ ಹೆಚ್ಚಳ ಆಗಿ ಹೃದಯದ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಜತೆ ಚಳಿಗಾಲದಲ್ಲಿ ವಾಯು ಮಾಲಿನ್ಯ ಹೆಚ್ಚಳ ಆಗಲಿದ್ದು, ಮಾಲಿನ್ಯದ ಕಣಗಳು ಉಸಿರಾಟದ ಮೂಲಕ ಶ್ವಾಸಕೋಶಕ್ಕೆ ಪ್ರವೇಶ ಆಗುತ್ತೆ. ರಕ್ತದಲ್ಲಿ ಸಂಗ್ರಹ ಮತ್ತು ರಕ್ತನಾಳಗಳಲ್ಲಿ ಅಡಚಣೆ ಆಗಿ ಹೃದಯಾಘಾತದ ಅಪಾಯ ಹೆಚ್ಚು ಕಂಡು ಬರ್ತಿದೆ.

Edited By : Ashok M
PublicNext

PublicNext

07/12/2024 10:08 pm

Cinque Terre

27.91 K

Cinque Terre

0

ಸಂಬಂಧಿತ ಸುದ್ದಿ