ಬೆಂಗಳೂರು: 3ಡಿ ವಿಷನ್ ತಂತ್ರಜ್ಞಾನ ಬಳಸಿ ಪ್ರೋಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಾ ಇದ್ದ ಮಹಾರಾಷ್ಟ್ರದ ನಾಗಪುರ ಮೂಲದ ೬೮ ವರ್ಷದ ರೋಗಿಗೆ ವೈಟ್ ಫೀಲ್ಡ್‌ನಲ್ಲಿರುವ ಮೆಡಿಕವರ್ ಆಸ್ಪತ್ರೆಯಲ್ಲಿ ರೋಬೊಟಿಕ್ ಸರ್ಜರಿ ನಡೆಸಲಾಗಿದೆ.
ರೋಗಿಯೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ಓಪನ್ ಸರ್ಜರಿ ನಡೆಸಬೇಕೆಂದು ಸಲಹೆ ನೀಡಲಾಗಿತ್ತು. ಆದ್ರೆ ಮೆಡಿಕವರ್ ಆಸ್ಪತ್ರೆಯ ರೋಬೊಟಿಕ್ ಶಸ್ತ್ರವೈದ್ಯ ಹಾಗೂ ಮೂತ್ರಪಿಂಡ ತಜ್ಞ ಡಾ. ಪ್ರಮೋದ್ ಎಸ್ ಅವರು ಕೇವಲ ಒಂದು ಸಣ್ಣ ರಂಧ್ರದ ಮೂಲಕ ರೋಬೊಟಿಕ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಚಿಕಿತ್ಸೆ ನಡೆದ ಮೂರೇ ದಿನದಲ್ಲಿ ರೋಗಿಯು ಎಂದಿನಂತೆ ನಡೆಯೋದಕ್ಕೆ ಸಾಧ್ಯವಾಗಿದೆ. ಈ ಚಿಕಿತ್ಸೆಗೆ ಸುಮಾರು 4 ಗಂಟೆ ತಗಲಿದ್ದು, ಅಧುನಿಕ ರೋಬೊಟಿಕ್ ತಂತ್ರಜ್ಙಾನನ ಬಳಕೆ ಮಾಡಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ರೋಗಿ ಈಗ ಎಂದಿನಂತೆ ಜೀವನ ಶೈಲಿಯನ್ನು ಮುಂದುವರಿಸೋಕೆ ಅವಕಾಶವಾಗಿದೆ ಎಂದು ಡಾ . ಪ್ರಮೋದ್ ಸಂತೋಷ ವ್ಯಕ್ತಪಡಿಸಿದ್ದಾರೆ .
ಚಿಕಿತ್ಸೆ ಪಡೆದ ರೋಗಿ ವಾಪಾಸ್ ಮನೆಗೆ ತೆರಳುವಾಗ ಆಸ್ಪತ್ರೆಯ ಮುಖ್ಯಸ್ಥ ನವೀನ್ ಎನ್, ರೋಬೊಟಿಕ್ ಶಸ್ತ್ರವೈದ್ಯ ಹಾಗೂ ಮೂತ್ರಪಿಂಡ ತಜ್ಞ ಡಾ. ಪ್ರಮೋದ್ ಎಸ್, ಓಟಿ ಮುಖ್ಯಸ್ದ ಉಮೇಶ್, ಜನರಲ್ ಸರ್ಜನ್ ಪ್ರಥ್ವಿರಾಜ್ ನಗುಮುಖದಿಂದ ಕಳುಹಿಸಿಕೊಟ್ಟರು. ರೋಗಿಯೂ ಚಿಕಿತ್ಸೆ ಫಲಕಾರಿಯಾಗಿದ್ದಕ್ಕೆ ಎಲ್ಲ ವೈದ್ಯರಿಗೆ ಧನ್ಯವಾದ ತಿಳಿದರು.
Kshetra Samachara
02/12/2024 08:23 pm