ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ 3 ಅಲೆ ನೆಲಮಂಗಲದಲ್ಲಿ ವೃದ್ಧ ಮಹಿಳೆ ಸಾವು

ನೆಲಮಂಗಲ : ತಾಲ್ಲೂಕಿನ ಕುಲುವನಹಳ್ಳಿಯ 65 ವರ್ಷದ ವೃದ್ದ ಮಹಿಳೆ ಕಳೆದ ಜ.9 ರಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದರಿಂದ ನೆಲಮಂಗಲದ ಸಾರ್ವಜನಿಕ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ. ಸದ್ಯ ಖಾಸಗಿ ಆ್ಯಂಬುಲೆನ್ಸ್ ವಾಹನದ ಮೂಲಕ ಸೋಂಕಿತ ಮಹಿಳೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಆರೋಗ್ಯ ನಿರೀಕ್ಷಣಾಧಿಕಾರಿ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇನ್ನು ನೆಲಮಂಗಲದಲ್ಲಿ ದಿನೇದಿನೇ ಕೊರೊನಾ ಕೇಸ್ ಗಳು ಏರಿಕೆಯಾಗುತ್ತಿದ್ದು ಕೊರೊನಾ ಹಾಟ್ ಸ್ಪಾಟ್ ಆಗಲಿದ್ಯಾ ನೆಲಮಂಗಲ ತಾಲ್ಲೂಕು...? ಎನ್ನುವ ಆತಂಕ ಜನರಲ್ಲಿ ಹೆಚ್ಚಾಗಿದೆ.

ಈಗಾಗಲೇ ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಯ ಓರ್ವ ಮಹಿಳಾ ವೈದ್ಯರು, ಓರ್ವ ಲ್ಯಾಬ್ ಟೆಕ್ನಿಷೀಯನ್ ಸೇರಿದಂತೆ 13 ಮಂದಿ ಸಿಬ್ಬಂದಿಗಳಿಗೆ ಸೇರಿದಂತೆ ಒಟ್ಟು 18 ಮಂದಿಗೆ ಕೊರೊನಾ ದೃಢಪಟ್ಟಿದೆ. ಹಿನ್ನೆಲೆಯಲ್ಲಿ ನಗರಸಭೆಯಿಂದ ಸಂಪೂರ್ಣ ಆಸ್ಪತ್ರೆ ಆವರಣವನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.

Edited By : Nirmala Aralikatti
Kshetra Samachara

Kshetra Samachara

13/01/2022 05:52 pm

Cinque Terre

712

Cinque Terre

0

ಸಂಬಂಧಿತ ಸುದ್ದಿ