ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕತ್ತರಿಯಿಂದ ಸ್ನೇಹಿತನಿಗೆ ಚುಚ್ಚಿ ಬಳಿಕ ಭಯದಿಂದ ಬಾಲ್ಕನಿಯ ಕಿಟಕಿಯಿಂದ ಹಾರಿದ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನೊಂದಿಗೆ ಜಗಳವಾಡಿ ನಂತರ ಸ್ನೇಹಿತನಿಗೆ ಕತ್ತರಿಯಿಂದ ಹೊಟ್ಟೆಗೆ ಚುಚ್ಚಿ ನಂತರ ಭಯದಿಂದ ಎರಡನೇ ಮಹಡಿಯಿಂದ ಹಾರಿ ಗಾಯಗೊಂಡಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು, ನಾಗಾಲ್ಯಾಂಡ್ ಮೂಲದ ಹೇಕಾ ಹಲ್ಲೆಗೊಳಗಾದ ಯುವಕನಾಗಿದ್ದು, ರೂಮ್ ಮೇಟ್ ಆಗಿರುವ ರೋಹಿತ್ ಹಲ್ಲೆ ನಡೆಸಿ ಭೀತಿಯಿಂದ ಮೂರನೇ ಮಹಡಿಯಿಂದ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ರೋಹಿತ್ ಹಾಗೂ ಹೇಕಾ ಸೇರಿದಂತೆ ಐವರು ಸ್ನೇಹಿತರು ಒಂದೇ ರೂಮ್ ನಲ್ಲಿ ವಾಸವಾಗಿದ್ದರು. ಇವರೆಲ್ಲರೂ ಕೋರಮಂಗಲದ ರೆಸ್ಟೋರೆಂಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಐವರು ಕುಡಿದು ಪಾರ್ಟಿ ಮಾಡಿದ್ದಾರೆ. ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ರೋಹಿತ್ ಹಾಗೂ ಹೇಕಾ ನಡುವೆ ಮಾತಿನ ವಾಗ್ವಾದ ನಡೆದಿದೆ. ನೋಡು ನೋಡುತ್ತಿದ್ದಂತೆ ಜಗಳ ತಾರಕಕ್ಕೇರಿದೆ.

ಈ ವೇಳೆ ಮೀಸೆ ಕಟ್ ಮಾಡುವ ಕತ್ತರಿಯಿಂದ ಹೇಕಾ ಪಕ್ಕೆಲುಬಿಗೆ ಚುಚ್ಚಿ ರೋಹಿತ್ ಹಲ್ಲೆ ನಡೆಸಿದ್ದಾನೆ. ಬಳಿಕ ಭೀತಿಯಿಂದ ರೂಮ್ ಲಾಕ್ ಮಾಡಿಕೊಂಡು ಬಾಲ್ಕನಿ ಕಿಟಕಿಯಿಂದ ಕೆಳಗೆ ಬಿದ್ದು ರೋಹಿತ್ ಗಾಯ ಮಾಡಿಕೊಂಡಿದ್ದಾನೆ. ಸದ್ಯ ಬೇಗೂರು ಪೊಲೀಸ್ ಠಾಣೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

07/09/2022 06:43 pm

Cinque Terre

2.08 K

Cinque Terre

0

ಸಂಬಂಧಿತ ಸುದ್ದಿ