ಬೆಂಗಳೂರು: ಅವ್ನು ಒಂದ್ ಕಾಲದಲ್ಲಿ ಸಿಟಿ ಮಾರ್ಕೆಟ್ ಸುತ್ತ ಮುತ್ತಲಿನ ದೇವಸ್ಥಾನಗಳ ಬಳಿ ಚಪ್ಪಲಿ ಕದಿಯುತ್ತಿದ್ದ ಸಾಮಾನ್ಯ ಕಳ್ಳ. ಅದ್ರೆ, ಇವತ್ತು ಪೊಲೀಸ್ರ ನಿದ್ದೆಗೆಡಿಸಿರುವ ಕುಖ್ಯಾತ ಕಳ್ಳ! ವೆಬ್ ಸೀರಿಸ್ ನಲ್ಲಿ ಬರೋ ಕ್ರೈಂ ಸೀನ್ ಗಳನ್ನ ನೋಡಿ ಮನೆ ಕಳ್ಳತನಕ್ಕಿಳಿದ್ದಿದ್ದ ಈ ಕಿರಾತಕ ಮೂರು ಮದ್ವೆಯಾಗಿ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದು, ಇದೀಗ ಕದ್ದ ಮಾಲಿನೊಂದಿಗೆ ಪೊಲೀಸ್ರ ಅತಿಥಿಯಾಗಿದ್ದಾನೆ.
ಹೆಸ್ರು ಪ್ರಕಾಶ @ ಬಾಲಾಜಿ. ಬೆಂಗಳೂರಿನ ಉತ್ತರಹಳ್ಳಿಯ ನಿವಾಸಿ. ಬಾಲ್ಯದಲ್ಲಿ ತಂದೆಯನ್ನ ಕಳೆದುಕೊಂಡ ಪ್ರಕಾಶ್, ಮನೆ ಬಿಟ್ಟು ಬಂದು ಕಲಾಸಿಪಾಳ್ಯ ಸೇರಿಕೊಂಡಿದ್ದ. ಅಲ್ಲಿನ ಕಾಟಯ್ಯ ಎಂಬಾತನೊಂದಿಗೆ ಸೇರಿಕೊಂಡ ಪ್ರಕಾಶ, ದೇವಸ್ಥಾನಗಳ ಮುಂದೆ ಚಪ್ಪಲಿಗಳನ್ನ ಕದ್ದು, ಜೀವನ ಸಾಗಿಸ್ತಿದ್ದ.
ಅದಾದ ಬಳಿಕ ಜೈಲು ಸೇರಿದ್ದ ಪ್ರಕಾಶ, ಮನೆಗಳ್ಳತನಕ್ಕೂ ಕೈ ಹಾಕಿದ್ದ. ಬೀಗ ಹಾಕಿರೋ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಪ್ರಕಾಶ, ಕಳ್ಳತನ ಮಾಡಿದ್ರು ಸಿಕ್ಕಿ ಬೀಳದಂತ ಟ್ರಿಕ್ಸ್ ಹುಡುಕ್ತಿದ್ದ. ಅದಕ್ಕೆಂದೇ ಯೂಟ್ಯೂಬ್ ಹಾಗೂ ವೆಬ್ ಸಿರೀಸ್ ಗಳನ್ನ ನೋಡಿದ್ದ. ಅಲ್ಲಿ ಬರೋ ಕ್ರೈಮ್ ಸೀನ್ ಗಳಿಂದ ಪ್ರಭಾವಿತನಾಗಿದ್ದ ಪ್ರಕಾಶ್ ನೇರವಾಗಿ ಕಳ್ಳತನಕ್ಕಿಳಿಯದೇ, ಬಾಡಿಗೆ ಮನೆ ಹುಡುಕೋ ನೆಪದಲ್ಲಿ ಯಾವ ಮನೆಯಲ್ಲಿ ಸಲೀಸಾಗಿ ಕಳವು ಮಾಡ್ಬೋದು ಅಂತ ಸ್ಕೆಚ್ ಹಾಕ್ತಿದ್ದ. ಆ ವೇಳೆ ಮನೆಗೆ ಹಾಕಿರೋ ಬೀಗದ ಪೋಟೋ ತೆಗೆದುಕೊಂಡು ಅದರ ಕೀಯನ್ನ ನಕಲಿ ಮಾಡ್ತಿದ್ದ. ಬೇರೆ ಯಾರಿಂದಾದ್ರೂ ಕೀ ಮಾಡಿಸಿದ್ರೆ ಡೌಟ್ ಬರುತ್ತೆ ಅಂತ ನಕಲೀ ಕೀ ತಯಾರಿಗೆ ಬೇಕಾದ ಎಲ್ಲಾ ಟೂಲ್ಸ್ ಸಹ ಇಟ್ಕೊಂಡಿದ್ದ.
ಇನ್ನು, ಯಾವುದೇ ಡೋರ್ ಬ್ರೇಕ್ ಮಾಡದೇ ಮನೆಗಳ್ಳತನ ಮಾಡ್ತಿದ್ದ ಪ್ರಕಾಶ್ ಬಾಗಿಲು ತೆರೆಯಲು ಬಳಸಿದ ಕೀ ಸಹ ಜೇಬಿನಲ್ಲಿ ಹಾಕಿಕೊಂಡು ಮನೆಯ ಒಂದಿಂಚು ಬಿಡದೆ ಜಾಲಾಡಿ ಸಿಕ್ಕಿದ್ದನ್ನ ದೋಚಿ ಎಸ್ಕೇಪ್ ಆಗ್ತಿದ್ದ. ಹೀಗೆ ಚಿನ್ನಾಭರಣ ದೋಚಿ ಪರಾರಿಯಾಗ್ತಿದ್ದ ಪ್ರಕಾಶ ಕದ್ದ ಮಾಲುಗಳನ್ನ ಮಾರಾಟ ಮಾಡಿ ಬಂದ ಹಣದಿಂದ ಮುರುಗೇಶ್ ಪಾಳ್ಯದಲ್ಲಿ ಅಪಾರ್ಟ್ಮೆಂಟ್ ಲೀಸ್ ಗೆ ಹಾಕಿಕೊಂಡಿದ್ದ. ಅಷ್ಟೇ ಅಲ್ಲದೇ ಕ್ರಿಕೆಟ್ ಬೆಟ್ಟಿಂಗ್, ಜೂಜಾಟದಲ್ಲಿ ಈ ಶೋಕಿಲಾಲ ಒಬ್ಬರಲ್ಲ, ಇಬ್ಬರಲ್ಲ ಮೂರು ಹೆಂಡ್ತಿಯರ ಮುದ್ದಿನ ಗಂಡನಾಗಿದ್ದ. ಆದ್ರೆ, ಸಿಕ್ಕ ಸಣ್ಣ ಸುಳಿವಿನ ಆಧಾರದ ಮೇಲೆ ಫೀಲ್ಡ್ ಗಿಳಿದ ಹೆಚ್ಎಸ್ಆರ್ ಲೇಔಟ್ ಪೊಲೀಸ್ರು ತಲೆಮರೆಸಿಕೊಂಡು ಓಡಾಡ್ತಿದ್ದ ಖದೀಮನನ್ನು ಖೆಡ್ಡಾಕ್ಕೆ ಕೆಡವಿ ಅರೆಸ್ಟ್ ಮಾಡಿದ್ದಾರೆ.
ಸದ್ಯ, ಆರೋಪಿಯನ್ನ ಹೆಚ್ಚಿನ ವಿಚಾರಣೆಗೊಳಪಡಿಸಿರೋ ಪೊಲೀಸ್ರು, ಆರೋಪಿ ಸುಮಾರು 46 ಮನೆಗಳ್ಳತನ ಎಸಗಿರೋದು ಬೆಳಕಿಗೆ ಬಂದಿದೆ. ಅವುಗಳಲ್ಲಿ 7 ಮನೆಗಳ್ಳತನ ಪ್ರಕರಣ ಪತ್ತೆ ಹಚ್ಚಿರೋ ಪೊಲೀಸ್ರು, ಆರೋಪಿಯಿಂದ ಸುಮಾರು 750 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
PublicNext
20/08/2022 06:32 pm