ಬೆಂಗಳೂರು: ಬೆಂಗಳೂರಿನ ಈಶಾನ್ಯ ವಿಭಾಗದ ಯಲಹಂಕ ಪೊಲೀಸರು ಇಬ್ಬರು ಬೈಕ್ ಕಳ್ಳರನ್ನ ಬಂಧಿಸಿ, 6ಲಕ್ಷ ಬೆಲೆಯ 11ಬೈಕ್ಗಳನ್ನ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಆರ್‌ಟಿ ನಗರದ ಮುಭಾರಕ್ (20) ಮತ್ತು ಯಲಹಂಕ ಗಾಂಧಿನಗರದ ಮಹೇಶ್ ಬಂಧಿತ ಖದೀಮರು.
ಇವರ ಬಂಧನದಿಂದ ಯಲಹಂಕ-3, ಯಲಹಂಕ ಉಪನಗರ-4, ಆರ್‌ಟಿ ನಗರ-2, ಡಿಜೆ.ಹಳ್ಳಿಯಲ್ಲಿ -1, ಹೆಬ್ಬಾಳದಲ್ಲಿ 1 ಹೀಗೆ ಒಟ್ಟು 11ಬೈಕ್ ಕಳವು ಪ್ರಕರಣ ಪತ್ತೆಯಾಗಿವೆ. ಬಂಧಿತರು ವೃತ್ತಿನಿರತ ಬೈಕ್ ಕಳ್ಳರಾಗಿದ್ದು, ಖದೀಮರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Kshetra Samachara
11/08/2022 07:44 pm