ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಮಾನಸಿಕವಾಗಿ ಮನನೊಂದ ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ನೆಲಮಂಗಲ : ಮಾನಸಿಕವಾಗಿ ಮನನೊಂದ ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲದ ತಿಮ್ಮಶೆಟ್ಟಪ್ಪ ಬಡಾವಣೆಯಲ್ಲಿ ನೆಡೆದಿದೆ.

ಇನ್ನೂ ಕುಣಿಗಲ್ ಮೂಲದ 55 ವರ್ಷದ ರೇಣುಕಮ್ಮ ಮೃತ ಮಹಿಳೆಯಾಗಿದ್ದು, ಕಳೆದ 20 ವರ್ಷದ ಹಿಂದೆ ಪತಿಯನ್ನ ತೊರೆದು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ 15 ವರ್ಷದಿಂದ ನೆಲಮಂಗಲದಲ್ಲಿ ವಾಸವಿದ್ರು. ಬಳಿಕ ಮೊದಲ ಮಗಳು ಚೈತ್ರ ಮತ್ತು ಎರಡನೇ ಮಗಳಿಬ್ಬರಿಗೂ ಮದುವೆ ಮಾಡಿಕೊಟ್ಟ ಬಳಿಕವೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ಕಳೆಯಬೇಕೆಂದು ಮೃತ ರೇಣುಕಮ್ಮ ಆಸೆ ಹೊಂದಿದ್ರು.

ಆದ್ರೆ ಎರಡನೇ ಮಗಳು ಶ್ವೇತಾ ಒಟ್ಟಿಗೆ ಇರಲು ಬಾರದಿದ್ದ ಕಾರಣಕ್ಕೆ ಮನನೊಂದು ಮನೆಯಲ್ಲಿ ಫಾನ್ ಹುಕ್ಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಧಾವಿಸಿದ ನೆಲಮಂಗಲ ನಗರ ಪೊಲೀಸ್ರು ಪರಿಶೀಲನೆ ನೆಡೆಸಿದ್ದು, ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Shivu K
PublicNext

PublicNext

23/07/2022 04:23 pm

Cinque Terre

32.72 K

Cinque Terre

0

ಸಂಬಂಧಿತ ಸುದ್ದಿ