ಬೆಂಗಳೂರು: ನಗರದ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಆರ್.ಆರ್.ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ಗೆ ಬೆದರಿಕೆ ಮೇಲ್ ಬಂದಿದ್ದು,ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿ ಒಡೆತನದ ಸ್ಕೂಲ್ ಇದಾಗಿದೆ.ಮೇಲ್ ಮೂಲಕ ಬೆದರಿಕೆ ಹಾಕಿರೋ ದುಷ್ಕರ್ಮಿಗಳು ನಿನ್ನೆ ರಾತ್ರಿ ಬಾಂಬ್ ಇಡೋದಾಗಿ ಈ ಮೇಲ್ ಮಾಡಿದ್ದಾರೆ.
ಪ್ರಕರಣ ಸಂಬಂಧ ಆರ್.ಆರ್.ನಗರ ಪೊಲೀಸ್ರು ತನಿಖೆ ನಡೆಸ್ತಿದ್ದಾರೆ. ಈ ಹಿನ್ನೆಲೆ ನ್ಯಾಷನಲ್ ಸ್ಕೂಲ್ ಕಡೆ ಬಾಂಬ್ ಸ್ಕ್ವಾಡ್ ಧಾವಿಸಿ ಪರಿಶೀಲನೆ ನಡೆಸ್ತಿದೆ.
ನ್ಯಾಷನಲ್ ಹಿಲ್ ವ್ಯೂವ್ ಸ್ಕೂಲ್ ನ ಯೂನಿಟ್ 3ಗೆ ಕಿಡಿಗೆಡಿಗಳು ಮೇಲ್ ಮಾಡಿದ್ದಾರೆ. ನಿನ್ನೆ ಸಂಜೆ ಮೇಲ್ ಮಾಡಿ ಬೆದರಿಕೆ ಹಾಕಿರೋ ಕಿಡಿಗೇಡಿಗಳ ಕೃತ್ಯ, ಸಿಬ್ಬಂದಿ ಬೆಳಗ್ಗೆ ಶಾಲೆಗೆ ಬಂದು ಮೇಲ್ ಚೆಕ್ ಮಾಡಿದಾಗ ಬೆಳಕಿಗೆ ಬಂದಿದೆ.ಈ ಹಿನ್ನೆಲೆ ಯೂನಿಟ್ 1 ನಿಂದ ಯೂನಿಟ್ 2 ಗೆ ಸುಮಾರು ಒಂದು ಸಾವಿರದ ಐದುನೂರು ಮಕ್ಕಳನ್ನ ಶಿಫ್ಟ್ ಮಾಡಿದ್ದಾರೆ.
PublicNext
18/07/2022 11:18 am