ಬೆಂಗಳೂರು:ತಡರಾತ್ರಿ ಹಳೇ ಮದ್ರಾಸ್ ರಸ್ತೆ ಬಳಿ ಯುವತಿಯೊಬ್ಬಳ ವಿಚಾರವಾಗಿ ಯುವಕನ ಹತ್ಯೆಯಾಗಿದೆ. ಜಸ್ಟ್ ಮಾತನಾಡುವುದಾಗಿ ಕರೆಸಿದ್ದ ಮೂವರು ಆರೋಪಿಗಳು ದೊಣ್ಣೆಯಿಂದ ಪ್ರಜ್ವಲ್ ಮೇಲೆ ಹಲ್ಲೆ ನಡೆಸಿದ್ರು.
ಪ್ರಜ್ಞಾಹೀನನಾಗಿದ್ದವನನ್ನ ತಾವೇ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದ ಆರೋಪಿಗಳು, ವೈದ್ಯರು ಮೃತಪಟ್ಟಿರುವುದಾಗಿ ಕನ್ಫರ್ಮ್ ಮಾಡುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸದ್ಯ ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ ಇಬ್ಬರು ಶಂಕಿತ ಆರೋಪಿಗಳನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
PublicNext
16/07/2022 06:16 pm