ಬೆಂಗಳೂರ:ಆಂಧ್ರ ಪ್ರದೇಶದ ಕಾಡುಗಳಿಂದ ರಕ್ತಚಂದ ಸ್ಮಗಲ್ ಮಾಡ್ತಿದ್ದ ಆರೋಪಿಗಳನ್ನ ಕೆಂಗೇರಿ ಪೊಲೀಸ್ರು ಬಂಧಿಸಿದ್ದಾರೆ.
ಚೇಮಲ ಚಂಚುರಾಜ ಎಂಬ ವ್ಯಕ್ತಿಯನ್ನು ಬಂಧಿಸಿದ್ದು,ಆಂಧ್ರ ಪ್ರದೇಶದ ಅನ್ನಮ್ಮಯ್ಯ ಎಂಬ ಪ್ರದೇಶದಿಂದ ಮೈಸೂರಿಗೆ ಸಾಗಾಟ ಮಾಡುವ ವೇಳೆ ಕೆಂಗೇರಿ ಪೊಲೀಸ್ರಿಗೆ ತಗಲಾಕಿಕೊಂಡಿದ್ದಾರೆ.
ಮೈಸೂರು ರಸ್ತೆ ಬಳಿ ತಪಾಸಣೆ ವೇಳೆ ಆರೋಪಿಗಳು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿತ್ತು. ಈವೇಳೆ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದು ಮತ್ತೊಬ್ಬ ಅರೆಸ್ಟ್ ಆಗಿದ್ದಾನೆ. ಬಂಧಿತನಿಂದ 105ಕೆಜಿಯ ಐದು ರಕ್ತಚಂದನದ ತುಂಡು ವಶಕ್ಕೆ ಪಡೆದಿದ್ದು ಇದರ ಬೆಲೆ ಮೂರು ಲಕ್ಷ ಎಂದು ಅಂದಾಜಿಸಲಾಗಿದೆ.
ಇನ್ನೂ ಈ ಆರೋಪಿಗಳು ಕೇವಲ ಸ್ಯಾಂಪಲ್ ಪೀಸ್ ಗಳನ್ನ ತಂದಿದ್ದು ದೊಡ್ಡ ಮಟ್ಟದಲ್ಲಿ ಡೀಲ್ ಮಾಡಲು ಆಗಮಿಸಿರುವ ಶಂಕೆ ವ್ಯಕ್ತವಾಗಿದೆ.ಸದ್ಯ ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಶ್ರೀನಿವಾಸಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
14/07/2022 09:39 pm