ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಜೈಲಿಂದ ವೀಡಿಯೋ ಕಾಲ್‌ನಲ್ಲಿ ಹಫ್ತಾಗೆ ಧಮ್ಕಿ; FIR ದಾಖಲಿಸದ ಇನ್ಸ್ಪೆಕ್ಟರ್ ,ಪಿಎಸ್‌ಐ ಸಸ್ಪೆಂಡ್!

ಬೆಂಗಳೂರು: ಹಫ್ತಾಗೆ ಜೈಲಿನಿಂದ ವೀಡಿಯೋ ಕಾಲ್ ಮಾಡಿ ಧಮ್ಕಿ ಹಾಕಿದ್ದ ಕುಖ್ಯಾತ ರೌಡಿ ಶೀಟರ್ ಗಳ‌ಮೇಲೆ ಎಫ್‌ಐಆರ್ ದಾಖಲಿಸದ ಹಿನ್ನೆಲೆ ಕಲಾಸಿಪಾಳ್ಯ ಇನ್ಸ್ಪೆಕ್ಟರ್ ಚೇತನ್ ಮತ್ತು ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಸೇವೆಯಿಂದ ಅಮಾನತ್ತಾಗಿದ್ದಾರೆ.

ಪ್ರಕರಣ ದಾಖಲಿಸಿಕೊಳ್ಳದಂತೆ ಕುಖ್ಯಾತ ರೌಡಿಶೀಟರ್ ಗಳಿಂದ ಹಣ ಪಡೆದ ಆರೋಪದಡಿ ಕಲಾಸಿಪಾಳ್ಯ ಇನ್ಸ್ಪೆಕ್ಟರ್ ಹಾಗೂ ಸಬ್‌ ಇನ್‌ಸ್ಪೆಕ್ಟರ್ ನನ್ನು‌ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅಮಾನತು ಮಾಡಿ ಆದೇಶಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಮುಯೀಜ್ ಅಹಮ್ಮದ್ ಸೇರಿದ ನಿವೇಶನ ವಿಚಾರದಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಸೈಟು ತನ್ನದೆಂದು ಕೋರ್ಟ್ ಗೆ ಮೊರೆ ಹೋಗಿದ್ದರು.‌

ಇದೇ ವಿಚಾರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಕಳೆದ ತಿಂಗಳು 6ರಂದು ಕುಖ್ಯಾತ ರೌಡಿಶೀಟರ್ ಆಗಿರುವ ಧಾರವಾಡ ಜೈಲಿನಲ್ಲಿರುವ ಬಾಂಬೆ ಸಲೀಂ ಸಹಚರನ‌ ಮುಖಾಂತರ ವೀಡಿಯೋ ಕಾಲ್‌ನಲ್ಲಿ ಮಾತನಾಡಿ 8 ಲಕ್ಷ ಹಣನೀಡಬೇಕು. ಹಣ ನೀಡದಿದ್ದರೆ ನಿಮ್ಮ ಮನೆಗೆ ಬಿಳಿ ಬಟ್ಟೆ ಕಳುಹಿಸುತ್ತೇನೆ ಎಂದು ಧಮ್ಕಿ ಹಾಕಿದ್ದ. ಇದಕ್ಕೆ ಮುಯೀಜ್ ತಲೆಕೆಡಿಸಿಕೊಂಡಿರಲಿಲ್ಲ.. ಕಾಲಕ್ರಮೇಣ ಸಲೀಂ ಸಹಚರರು ಪೋನ್ ಮಾಡಿ ಜೀವ ಬೆದರಿಕೆ ಹಾಕಿದ್ದರು.

ಕಿರುಕುಳ ಹೆಚ್ಚಾದಂತೆ ಕಲಾಸಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಳ್ಳದೆ ಆರೋಪಿಗಳಿಂದ ಹಣ ಪಡೆದ ಕೇಸ್ ದಾಖಲಿಸಿಕೊಳ್ಳದೆ ಸುಮ್ಮನಾಗಿದ್ದರು. ಸೂಕ್ತ ಕ್ರಮಕ್ಕಾಗಿ ಶೇಷಾದ್ರಿ ರಸ್ತೆಯಲ್ಲಿರುವ ಕಾರಾಗೃಹ ಇಲಾಖೆಯ ಡಿಐಜಿಗೆ ದೂರು ನೀಡಿದ್ದರು.

ದೂರು ಪರಿಶೀಲಿಸಿ ನಗರ ಪೊಲೀಸ್ ಆಯುಕ್ತರಿಗೆ ವರ್ಗವಾಗಿತ್ತು.‌ಬಳಿಕ ಸಿಸಿಬಿ ತನಿಖೆ ಕೈಗೆತ್ತಿಕೊಂಡು ಬಾಂಬೆ ಸಲೀಂ ಸಹಚರರಾದ ಅಬ್ದುಲ್‌ ಜಾಫರ್, ಶೂಟರ್ ಕದೀಂ, ಇಮ್ರಾನ್, ಬಾಂಬೆ ರಿಯಾಜ್, ಖದೀರ್ ಹಾಗೂ ಆಲಿ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಸಿಸಿಬಿ ಬಂಧಿಸಿದೆ. ಧಾರವಾಡ ಜೈಲಿನಲ್ಲಿ ಸಲೀಂನನ್ನ ಬಾಡಿ ವಾರೆಂಟ್ ಪಡೆದು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತೊಂದೆಡೆ ಪ್ರಕರಣ ದಾಖಲಿಸಿಕೊಳ್ಳದೆ ಹಣ ಪಡೆದು ನಿರ್ಲಕ್ಷ್ಯ ವಹಿಸಿದ ಆರೋಪದ ಕಲಾಸಿಪಾಳ್ಯ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಪಿಎಸ್ಐ ನನ್ನು ಸಸ್ಪೆಂಡ್ ಮಾಡಲಾಗಿದೆ.

Edited By : Nagesh Gaonkar
PublicNext

PublicNext

08/07/2022 08:32 am

Cinque Terre

78.97 K

Cinque Terre

1

ಸಂಬಂಧಿತ ಸುದ್ದಿ