ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆರೆಯಲ್ಲಿ ತೇಲುತ್ತಿದ್ದ ಸೂಟ್ಕೇಸ್‌ನಲ್ಲಿ ಮಹಿಳೆಯ ಶವ ಪತ್ತೆ ಕೇಸ್- ಕೊಲೆ‌ಗೈದ 2ನೇ ಪತಿ ಅರೆಸ್ಟ್‌

ನೆಲಮಂಗಲ: ಆಕೆ ಮೊದಲ ಪತಿಯನ್ನ ತೊರೆದಿದ್ದ ಮಹಿಳೆ. ಒಂಟಿ ಜೀವನ ನೆಡೆಸ್ತಿದ್ದ ಆಕೆಯನ್ನ ವರಿಸಿ ಜೀವನ ಕೊಟ್ಟಿದ್ದ ಎರಡನೇ ಪತಿ. ಆದ್ರೆ ದಿನ ಕಳೆದಂತೆ ಇಬ್ಬರ ನಡುವೆ ವೈಮನಸ್ಸು, ಅನುಮಾನ ಉಂಟಾಗಿ ಪತ್ನಿಯನ್ನ ಕೊಂದು ಬಳಿಕ ಶವವನ್ನ ಸೂಟ್ಕೇಸ್‌ನಲ್ಲಿಟ್ಟು ಕೆರೆಯಲ್ಲಿ ಬಿಸಾಡಿ ಪರಾರಿಯಾಗಿದ್ದ ಎರಡನೇ ಪತಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನೇನಹಳ್ಳಿ ಕೆರೆಯಲ್ಲಿ ಇದೇ ತಿಂಗಳ 14ರಂದು ಸೂಟ್ಕೇಸ್‌ನಲ್ಲಿ ಕೊಳೆತಸ್ಥಿತಿಯಲ್ಲಿದ್ದ ಮಹಿಳೆ ಮೃತ ದೇಹದ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದಾಬಸ್‌ಪೇಟೆ ಪೊಲೀಸರು ತನಿಖೆ ನಡೆಸಿದಾಗ ಮೃತ ಮಹಿಳೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವಾಸವಿದ್ದ 35 ವರ್ಷದ ಮಂಜುಳಾ ಎಂಬ ಮಾಹಿತಿ ಸಿಕ್ಕಿತ್ತು. ಇನ್ನೂ ಈಕೆಯನ್ನ ಕೊಲೆ ಮಾಡಿ ಸೂಟ್ಕೇಸ್‌ನಲ್ಲಿ ತುಂಬಿ ಕೆರೆಯಲ್ಲಿ ಎಸೆದಿದ್ದವನು ಮತ್ಯಾರೂ ಅಲ್ಲ, ಈಕೆಯನ್ನ ಕಳೆದ ಎರಡು ವರ್ಷದ ಹಿಂದೆ ವರಿಸಿದ್ದ ಎರಡನೇ ಪತಿ ಮತ್ತು ಆರೋಪಿ ರಾಮು. ಈ ಪ್ರಕರಣದಲ್ಲಿ ರಾಮು ಜೊತೆಗೆ ಶವ ಸಾಗಾಟಕ್ಕೆ ಸಹಕರಿಸಿದ್ದ ಬಸವಗೌಡ ಇಬ್ಬರನ್ನೂ ಸಹ ದಾಬಸ್‌ಪೇಟೆ ಪೊಲೀಸ್ರು ಬಂಧಿಸಿ ವಿಚಾರಣೆ ನೆಡೆಸ್ತಿದ್ದಾರೆ..

ಇನ್ನೂ ಮೃತ ಮಂಜುಳಾ ಕಳೆದ 18 ವರ್ಷದ ಹಿಂದೆ‌ ಗಂಗಾವತಿ ಮೂಲದ ವೀರೂಪಾಕ್ಷನೊಂದಿಗೆ ಮದುವೆಯಾಗಿದ್ಳು. ವೀರೂಪಾಕ್ಷನ ಅತಿ ಮದ್ಯ ವ್ಯಸನಿಯಾಗಿದ್ದ. ಅಲ್ಲದೆ ಜೂಜಿಗೆ ದಾಸನಾಗಿದ್ರಿಂದ ಇಬ್ಬರ ನಡುವೆ ಆಗಾಗ ಜಗಳವಾಗ್ತಿತ್ತು. ಮೊದಲ ಪತಿ ವೀರೂಪಾಕ್ಷನ ವರ್ತನೆಗೆ ಬೇಸತ್ತು ಆತನನ್ನು ತೊರೆಯಲು ನಿಶ್ಚಯಿಸಿದ್ದಳು. ಹೀಗಾಗಿ ಪತಿ ವೀರೂಪಾಕ್ಷ ಸಹ ತನ್ನಿಬ್ಬರ ಮಕ್ಕಳನ್ನ ಕರೆದ್ಕೊಂಡು ಗಂಗಾವತಿಗೆ ವಾಪಸ್‌ ಆಗಿದ್ದ. ಇದರ ನಡುವೆ ಒಂಟಿ‌ ಜೀವನ ಸಾಗಿಸ್ತಿದ್ದ ಮಂಜುಳಾ ಪೀಣ್ಯ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡ್ತಿದ್ದ ವೇಳೆ ಆರೋಪಿ ರಾಮು ಪರಿಚಯವಾಗಿ, ಪರಿಚಯ ಸ್ನೇಹವಾಗಿ ಪ್ರೀತಿಯಾಗಿ ನಂತ್ರ ಗೊರವನಹಳ್ಳಿ ಲಕ್ಷ್ಮಿ ದೇವಾಲಯದಲ್ಲಿ ಮದುವೆಯಾದ್ದರು. ಕಳೆದ 2 ವರ್ಷಗಳಿಂದ ಜೊತೆಯಲ್ಲಿ ಸಂಸಾರ ನಡೆಸುತ್ತಿದ್ರು ಸಹ ಇಬ್ಬರ ವೈವಾಹಿಕ ಜೀವನದ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿಯೇ ಇರಲಿಲ್ವಂತೆ. ಇತ್ತೀಚೆಗೆ ಮಂಜುಳಾ ಹಾಗೂ ಆರೋಪಿ ನಡುವೆ ಸಂಸಾರದಲ್ಲಿ ಏರುಪೇರುಗಳಾಗ್ತಿತ್ತಂತೆ, ಕಾರಣ ಮಂಜುಳ ಅತಿಯಾಗಿ ಫೋನ್‌ನಲ್ಲಿ ಮಾತಾಡ್ತಿದ್ಳಂತೆ, ಅಲ್ಲದೆ ಮನೆಯಲ್ಲಿ ಸರಿಯಾಗಿ ಅಡುಗೆ ಸಹ ಮಾಡದೆ ಅಸಡ್ಡೆಯಾಗಿ ವರ್ತಿಸುತ್ತಿದ್ಳಂತೆ. ಈ ಹಿಂದೆ ಸಾಕಷ್ಟು ಬಾರಿ ಜಗಳ ನಡೆದಿತ್ತಂತೆ. ಆದ್ರೆ ಇದೇ ತಿಂಗಳ 11ರಂದು ರಾತ್ರಿ ಸಿನಿಮಾ ನೋಡ್ಕೊಂಡು ಮನೆಗೆ ಬಂದ ಆರೋಪಿ ರಾಮು, ಮಂಜುಳಾ ಬಾಗಿಲು ತೆಗೆಯಲು ತಡ ಮಾಡಿದಕ್ಕೆ ಮತ್ತು ಮನೆಯಲ್ಲಿ ಅಡುಗೆ ಸಹ ಮಾಡದೆ ಮಲಗಿದ್ದಳ್ಳಂತೆ. ಇದ್ರಿಂದ ಕೊಂಪಗೊಂಡಿದ್ದ ರಾಮು ಬಾಗಿಲನ್ನ ಕಾಲಿನಿಂದ ಒದ್ದು, ಉದ್ರಿಕ್ತನಾಗಿ ಅಲ್ಲೆ ಇದ್ದ ಬಲವಾದ ಆಯುಧದಿಂದ ಆಕೆಯ ತಲೆಗೆ ಹೊಡೆದು, ವೇಲ್‌ನಿಂದ ಕುತ್ತಿಗೆ ಬಿಗಿದು ಜೀವ ಹಿಂಡಿದ್ದಾನೆ.

ಇನ್ನೂ ಕೊಲೆ ಮಾಡಿದ ನಂತ್ರ ಆರೋಪಿ ರಾಮು ತನ್ನ ಸ್ನೇಹಿತ ಹಾವೇರಿ ಮೂಲದ ಬಸವ‌ ಗೌಡನಿಗೆ ಫೋನ್ ಮಾಡಿ ತುರ್ತಾಗಿ ಬರುವಂತೆ ಕರೆಸಿ ಕೊಂಡಿದ್ದಾನೆ. ಬಂದ ನಂತರ ನಡೆದ ವಿಚಾರವನ್ನೆಲ್ಲಾ ತಿಳಿಸಿ 12ನೇ ತಾರೀಖು ಮಧ್ಯಾಹ್ನ 3 ಗಂಟೆ ಸಮಯಕ್ಕೆ ಲಗ್ಗೇಜ್ ಸೂ‌ಟ್ಕೇಸ್‌ನಲ್ಲಿ ಮಂಜುಳಾ ಕೈಕಾಲನ್ನ ವೇಲ್‌ನಿಂದ ಬಿಗಿದು ಮೃತದೇಹವನ್ನ ಬೇಕ್‌ನಲ್ಲಿ ತಂದು ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನೇನಹಳ್ಳಿಯ ಬಂಡೆ ಪಕ್ಕದ ಕೊಳ್ಳಕ್ಕೆ ಎಸೆದಿದ್ದರು. ಇನ್ನು ಮಂಜುಳಾ ತವರೂರು ಹೊನ್ನೇನಹಳ್ಳಿ ಪಕ್ಕದ ದೇಗನಹಳ್ಳಿ ಆದ್ರಿಂದ ಮೊದಲೇ ನೋಡಿದ್ದ ಕ್ವಾರೆಯ ಹೊಂಡಕ್ಕೆ ಮೃತದೇಹವನ್ನ ಎಸೆದು ಆರೋಪಿ ರಾಮು ಚೆನ್ನೈಗೆ ಪರಾರಿಯಾಗಿದ್ದ. ಬಸವಗೌಡ ಹಾವೇರಿಗೆ ವಾಪಸ್‌ ಆಗಿದ್ದ. ಚೆನ್ನೈನಿಂದ ಬಂದ ನಂತರ ಲಗ್ಗೆರಿಯ ಬಾರ್ ಒಂದರಲ್ಲಿ ಕುಳಿತು ಕುಡಿಯುತ್ತಿದ್ದ ವೇಳೆ ಟವರ್ ಲೋಕೇಷನ್ ಆಧಾರಿಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ಸದ್ಯ ಘಟನೆ ಸಂಬಂಧ ಆರೋಪಿಗಳನ್ನ ಬಂಧಿಸಿರೋ ಪೊಲೀಸ್ರು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ಬೈಕ್ ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆಸಿದ್ದಾರೆ. ಅತ್ತ ಒಂಟಿ ಜೀವನ ನಡೆಸ್ತಿದ್ದ ಮಹಿಳೆಗೆ ಬಾಳು ಕೊಡಲು ಮುಂದಾಗಿದ್ದವನೇ ಆಕೆಯ ಅಂತ್ಯಕ್ಕೆ ಕಾರಣವಾಗಿ ಜೈಲು ಸೇರಿದ್ದಾನೆ.

Edited By : Manjunath H D
PublicNext

PublicNext

30/06/2022 10:35 pm

Cinque Terre

57.19 K

Cinque Terre

0

ಸಂಬಂಧಿತ ಸುದ್ದಿ