ಬೆಂಗಳೂರು: ಅವರಿಬ್ಬರಿಗೂ ಮದುವೆ ಆಗಿ ಅದಾಗ್ಲೇ 5 ವರ್ಷ ಕಳೆದಿತ್ತು, ಇಬ್ರು ಮಕ್ಕಳಿದ್ರು. ಆದ್ರೆ, ಹೆಂಡತಿಗೆ ಮಾತ್ರ ಹಳೆ ಬಾಯ್ ಫ್ರೆಂಡ್ ಆಗಾಗ ಕಾಲ್ ಮಾಡ್ತಿದ್ದ. ಇವ್ರಿಬ್ರ ಸ್ನೇಹಕ್ಕೆ ಗಂಡ ಅಡ್ಡ ಬರ್ತಿದ್ದಾನೆ ಅಂತ ಬಾಯ್ ಫ್ರೆಂಡ್ , ಗಂಡನ ಬಾಯನ್ನ ಶಾಶ್ವತವಾಗಿಯೇ ಮುಚ್ಚಿಸಿದ್ದಾನೆ.
ಮದುವೆ ಆದರೂ ಕಾಲೇಜು ದಿನದ ಪ್ರಿಯತಮನನ್ನ ಬಿಡದ ಮಹಿಳೆ, ಪತಿಯ ಉಸಿರನ್ನೇ ನಿಲ್ಲಿಸಿದ್ದಾಳೆ. ಶಬ್ರೀನ್ ಮತ್ತು ಅಬ್ರಹಾಂ 5 ವರ್ಷದ ಹಿಂದೆ ಮದುವೆಯಾಗಿದ್ರು. ಶಬ್ರೀನ್ ತಂದೆಯೇ ಅಬ್ರಹಾಂ ಗೆ ಒಂದು ಚಿಲ್ಲರೆ ಅಂಗಡಿ ಹಾಕಿಕೊಟ್ಟು ಮನೆ ಅಳಿಯನಾಗಿ ಮಾಡಿಕೊಂಡಿದ್ರು.
ಅದಾಗಿಯೂ ಶಬ್ರೀನ್ ಪ್ರಿಯತಮ ನದೀಮ್ ಜೊತೆಗೆ ಸ್ನೇಹ ಮುಂದುವರಿಸಿದ್ಳು. ಇದೇ ವಿಚಾರಕ್ಕೆ ಪತ್ನಿ ಜೊತೆ ಜಗಳ ಆಡ್ತಿದ್ದ ಅಬ್ರಹಾಂ. ಈ ವಿಚಾರ ತಿಳಿದ ನದೀಂ, ಅಬ್ರಹಾಂಗೆ ಬುದ್ಧಿ ಕಲಿಸಲು ಮುಂದಾಗಿದ್ದ. ಏ.30ರಂದು ಚಂದ್ರ ಲೇಔಟ್ ನಿವಾಸ ಬಳಿಯಿಂದ ಕ್ವಾಲಿಸ್ ಕಾರಿನಲ್ಲಿ ಐದಾರು ಜನರೊಂದಿಗೆ ಅಬ್ರಹಾಂನನ್ನು ಕಿಡ್ನಾಪ್ ಮಾಡಿ ಅಜ್ಞಾತ ಸ್ಥಳದಲ್ಲಿಟ್ಟು ಬಾಯಿಗೆ ಬಟ್ಟೆ ತುರುಕಿ ಹಲ್ಲೆ ನಡೆಸಿದ್ರು. ಮೊದಲೇ ವೀಕ್ ಇದ್ದ ಅಬ್ರಹಾಂ ಪ್ರಾಣ ಬಿಟ್ಟಿದ್ದ.
ನಂತರ ಟಾಟಾ ಏಸ್ ನಲ್ಲಿ ಬಾಡಿ ಹಾಕ್ಕೊಂಡು ಚಂದ್ರ ಲೇಔಟ್ ಬಳಿಯ ಗಂಗೊಂಡಹಳ್ಳಿ ರಸ್ತೆ ಜಿಮ್ ಮುಂದೆ ಏ.1ರ ಮುಂಜಾನೆ ಬಿಸಾಡಿ ಹೋಗಿದ್ರು. ಅಸಹಜ ಸಾವೆಂದು ದೂರು ದಾಖಲಿಸಿದ್ದ ಪೊಲೀಸರು, ಡೌಟ್ ಮೇಲೆ ತನಿಖೆ ಆರಂಭಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ರೋಡಲ್ಲಿ ಹೆಣ ಬೀಳ್ತಿದ್ದಂತೆ ಅಬ್ರಹಾಂ ಮನೆಗೆ ಕಾಲ್ ಮಾಡಿ ವ್ಯಕ್ತಿಯೊಬ್ಬ ʼನಿಮ್ಮವನ ಹೆಣ ಬಿದ್ದಿದೆʼ ಎಂದಿದ್ದ.
ಇದ್ರ ಜಾಡು ಹಿಡಿದು ಹೊರಟ ಇನ್ ಸ್ಪೆಕ್ಟರ್ ಮನೋಜ್ ಮತ್ತವರ ಕ್ರೈಂ ತಂಡಕ್ಕೆ ಬಾಯ್ ಫ್ರೆಂಡ್ ನದೀಮ್ ಪಾಷ, ತನ್ವೀರ್, ಮುಬಾರಕ್, ಮಹಮ್ಮದ್ ತಬ್ರೇಜ್, ಅನ್ನಾನ್ ಸೇರಿ 7 ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಅಬ್ರಹಾಂ ನ ಹೆಂಡತಿ ಶಬ್ರೀನ್ ಮೇಲೂ ಅನುಮಾನ ಇದ್ದು ಪೊಲೀಸ್ರು ತನಿಖೆ ನಡೆಸ್ತಿದ್ದಾರೆ. ಇತ್ತ ನದೀಮ್ ಜತೆಗೆ ಸಹಚರರು ಜೈಲು ಸೇರಿದ್ದಾರೆ.
PublicNext
04/05/2022 12:08 pm