ಬೆಂಗಳೂರು: ಮುದ್ದುಮುದ್ದಾಗಿ ಅರಳು ಹುರಿದಂತೆ ಮಾತನಾಡುತ್ತಿದ್ದ ಅವಳು ಈಗ ಬರೀ ಅಮ್ಮಾ ಅಮ್ಮಾ ಅಂತಿದ್ದಾಳೆ. ದೇಹವೆಲ್ಲ ಆಸಿಡ್ ದಾಳಿಗೆ ತುತ್ತಾಗಿ ಈಗ ಅವಳು ನರಳುತ್ತಿದ್ದಾಳೆ. ಮಗಳ ಸ್ಥಿತಿ ಕಂಡು ಪೋಷಕರು ದಿಕ್ಕೇ ತೋಚದಂತಾಗಿದ್ದಾರೆ. ಆ್ಯಸಿಡ್ ದಾಳಿಗೆ ನರಕವಾಯಿತು ಯುವತಿಯ ಬದುಕು.
ಕ್ರೂರಿ ನಾಗೇಶ್ ಯುವತಿಯ ಬದುಕನ್ನೇ ಹಾಳು ಮಾಡಿದ. ನನ್ನನ್ನು ಪ್ರೀತಿ ಮಾಡು ಎಂದು ಪೀಡಿಸಿ, ಹುಡುಗಿ ಒಪ್ಪದಿದ್ದಾಗ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಒಂದು ಕಡೆ ಪೊಲೀಸರು ನಾಗೇಶನನ್ನು ಹುಡುಕುತ್ತಿದ್ದಾರೆ. ಇನ್ನೊಂದು ಕಡೆ ಹುಡುಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಯುವತಿಯ ಸ್ಥಿತಿ ಹೇಗಿದೆ ಎಂದು ಪಬ್ಲಿಕ್ ನೆಕ್ಸ್ಟ್ ಜೊತೆ ಯುವತಿಯ ದೊಡ್ಡಪ್ಪ ಮಾತನಾಡಿದ್ದಾರೆ.
-ನವೀನ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
03/05/2022 05:40 pm