ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಂಡನಿಗೆ ಚಟ್ಟ ಕಟ್ಟಿ, ಪ್ರಿಯಕರನಿಗೆ ಪಟ್ಟ ಕಟ್ಟಲು ಪತ್ನಿ ಮಾಡಿದ್ಲು ಹೈಡ್ರಾಮ!

ಬೆಂಗಳೂರು: ಮದುವೆ ಆಗಿ ಒಂದು ಹೆಣ್ಣು, ಒಂದು ಗಂಡು ಮಗುವಿದ್ರೂ ಆಕೆಗೆ ಪರ ಪುರುಷನ ಸಂಗ ಹಿತವೆನಿಸಿತ್ತು. ಪ್ರಿಯಕರನಿಗೆ ಗಂಡನ ಪಟ್ಟ ಕಟ್ಟಲು ಕೈ ಹಿಡಿದ ಗಂಡನನ್ನೇ ಚಟ್ಟಕ್ಕೇರಿಸಲು ಆಕೆ ಮಾಡಿದ ಪ್ಲಾನ್ ಕೇಳಿದ್ರೆ ಶಾಕ್ ಆಗೋದು ಪಕ್ಕಾ.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಪತಿಯನ್ನು ಕೊಂದು, ತಾನು ಗಂಡನ ಪಕ್ಕದಲ್ಲಿ ಸತ್ತಂತೆ ನಾಟಕವಾಡಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದ ಖತರ್ನಾಕ್ ಲೇಡಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿದ್ದ ಶಂಕರ್‌ ರೆಡ್ಡಿಯನ್ನು ನಿನ್ನೆ ಯಶವಂತಪುರ ಎಂ.ಕೆ. ನಗರದ ಮನೆಯಲ್ಲಿ ಕೊಲೆಗೈಯಲಾಗಿತ್ತು. ಪತ್ನಿ ರಾಣಿ ಕೂಡ ಸತ್ತ ಗಂಡನ ಪಕ್ಕದಲ್ಲಿ ರಕ್ತದ ಮಡುವಿನಲ್ಲಿ ಇದ್ದದ್ದನ್ನು ನೋಡಿ ಪೊಲೀಸ್ರು ತಲೆ ಕೆಡಿಸಿಕೊಂಡಿದ್ರು. ಆದ್ರೆ, ಆಸ್ಪತ್ರೆಗೆ ಹೋಗಿ ರಾಣಿಗೆ ಚಿಕಿತ್ಸೆ ಕೊಡಿಸಿದಾಗ ಆಕೆ ಮೇಲೆ ರಕ್ತ ಇದ್ದಿದ್ದು ಬಿಟ್ರೆ ಗಾಯಗಳಿರಲಿಲ್ಲ. ಇದ್ರಿಂದ ಅನುಮಾನಗೊಂಡ ಇನ್ಸ್‌ ಪೆಕ್ಟರ್ ಸುರೇಶ್ ತನಿಖೆ ಶುರು ಮಾಡಿದ್ರು.

ಆಗ ಗೊತ್ತಾಗಿದ್ದು ರಾಣಿ, ಚಿತ್ತೂರಿನ ತನ್ನ ಗ್ರಾಮದ ಯುವಕನ ಜೊತೆ ಹೊಂದಿದ್ದ ಅನೈತಿಕ ಸಂಬಂಧ ಕೊಲೆಗೆ ಕಾರಣ ಅಂತ. ಇದಕ್ಕೆ ಅಡ್ಡಿಯಾಗಿದ್ದ ಪತಿ ಶಂಕರ್ ನನ್ನು ಕೊಲ್ಲಲು ಮುಂದಾದ ಪತ್ನಿ ಕೆಲಸ ಮುಗಿಸಿ ಮನೆಗೆ ಬಂದ ಪತಿ ರಾತ್ರಿ ಗಾಢನಿದ್ರೆಯಲ್ಲಿದ್ದಾಗ ಚಾಕುವಿನಿಂದ ಕುತ್ತಿಗೆಗೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾಳೆ. ನಂತರ ತನ್ನ ಕೈಗೂ ಗಾಯ ಮಾಡಿಕೊಂಡಿದ್ದಾಳೆ. ರಕ್ತದ ಮಡುವಿನಲ್ಲಿದ್ದ ಪೋಷಕರನ್ನು ಕಂಡ ಮಕ್ಕಳು ನೆರೆಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಇನ್ನು, ಪೊಲೀಸರ ದಿಕ್ಕು ತಪ್ಪಿಸಲು ರಾಣಿ ದೊಡ್ಡ ಸೀನ್ ಕ್ರಿಯೇಟ್ ಮಾಡಿದ್ಳು. ಕಳ್ಳರು ಪತಿಗೆ ಚಾಕುವಿನಿಂದ ಇರಿದು ಮಾಂಗಲ್ಯ ಸರ ಕಳವು ಮಾಡಿದ್ದಾರೆ ಎಂದು ನಾಟಕವಾಡಿದ್ದಾಳೆ. ಆದರೆ, ಸರ ಅವಳ ಬಳಿಯೇ ಇರುವುದನ್ನು ಗಮನಿಸಿದ ಪೊಲೀಸರು ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ಕುಕೃತ್ಯ ಬಾಯ್ಬಿಟ್ಟಿದ್ದಾಳೆ.

ಸದ್ಯ, ಪೊಲೀಸರು ಆರೋಪಿ ರಾಣಿಯನ್ನು ಬಂಧಿಸಿ ತಲೆಮರೆಸಿಕೊಂಡಿರುವ ಪ್ರಿಯಕರನಿಗಾಗಿ ಬಲೆ ಬೀಸಿದ್ದಾರೆ‌. ಇತ್ತ ದೇಹ ಸುಖದ ಆಸೆಗೆ ಬಿದ್ದು ಗಂಡನನ್ನೇ ಕೊಂದು ತಾನೂ ಜೈಲು ಸೇರಿದ್ರೆ, ಮಕ್ಕಳು ಇಂತಹ ತಾಯಿ ಹೊಟ್ಟೆಯಲ್ಲಿ ಹುಟ್ಟಿ ಅನಾಥರಾಗಿದ್ದಾರೆ.

ಶ್ರೀನಿವಾಸ್ ಚಂದ್ರ, ʼಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು

Edited By : Manjunath H D
PublicNext

PublicNext

30/04/2022 07:33 pm

Cinque Terre

61.87 K

Cinque Terre

0

ಸಂಬಂಧಿತ ಸುದ್ದಿ