ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಟನ್ ಪೇಟೆ: ತವಕಲ್ ಮಸೀದಿ ಬಳಿ ಅಡಗಿದ್ದ ಇಬ್ಬರು ಗಲಭೆಕೋರರು ಅರೆಸ್ಟ್..

ಕಾಟನ್ ಪೇಟೆ: ಕಾಟನ್ ಪೇಟೆ ಬಳಿಯಿರುವ ತವಕಲ್ ಮಸೀದಿ ಬಳಿ ಇದ್ದ ಇಬ್ಬರು ಹುಬ್ಬಳ್ಳಿ ಗಲಭೆಕೋರರನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಹುಬ್ಬಳ್ಳಿಯಿಂದ ಪೋಲಿಸ್ ತಂಡ ಬಂದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ನಟೋರಿಯಸ್ ರೌಡಿ ಶೀಟರ್ ಅಬ್ದುಲ್ ಮಲಿಕ್ ಬೇಪಾರಿ ಹಾಗೂ ತುಫೇಲ್ ಮುಲ್ಲಾನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಇಬ್ಬರೂ ಗಲಭೆ ನಂತರ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದರು. ಕಾಟನ್ ಪೇಟೆಯ ಗೌಸಿಯಾ ಸರಾಯ ಲಾಡ್ಜ್ ನಲ್ಲಿ ಸ್ಟೇ ಆಗಿದ್ದ ಆರೋಪಿಗಳು, ನಿನ್ನೆ ರಾತ್ರಿ ಬಂದು ರೂಮ್ ಪಡೆದಿದ್ರು.ಅವರು ಬಹಳ ಸುಸ್ತಾದಂತೆ ಕಾಣ್ತಿದ್ರು, ಊಟಕ್ಕೆ ಅಂತಾ ಹೋಗಿದ್ರು.ಆ ವೇಳೆ ಪೊಲೀಸರು ಬಂದು ವಿಚಾರಿಸಿದ್ರು. ಆಗ ಇಬ್ಬರು ಹುಬ್ಬಳ್ಳಿಯಿಂದ ಬಂದಿರೋದಾಗಿ ಹೇಳಿದ್ದೆವು ಎಂದು ಲಾಡ್ಜ್ ಮ್ಯಾನೇಜರ್ ತಿಳಿಸಿದ್ದಾರೆ.

Edited By : Nagesh Gaonkar
PublicNext

PublicNext

21/04/2022 07:52 pm

Cinque Terre

60.5 K

Cinque Terre

6

ಸಂಬಂಧಿತ ಸುದ್ದಿ