ನೆಲಮಂಗಲ: ರಸ್ತೆಬದಿ ನಿಂತಿದ್ದ ಲಾರಿಯೊಂದಕ್ಕೆ ಬೈಕ್ ಸವಾರ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟ ಘಟನೆ ನೆಲಮಂಗಲದ ಲೋಹಿತ್ ನಗರದಲ್ಲಿ ನೆಡೆದಿದೆ.
ಇನ್ನೂ ನೆಲಮಂಗಲದ ಟೀಚರ್ಸ್ ಕಾಲೋನಿ ನಿವಾಸಿ ಸಚಿನ್ ಕುಮಾರ್ ದೇಸಾಯಿ( 35 ವರ್ಷ) ಮೃತಪಟ್ಟ ಬೈಕ್ ಸವಾರ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮೂಲದವರಾದ ಇವರು ಕಳೆದ 7-8 ವರ್ಷದಿಂದ ನಗರದ ಟೀಚರ್ಸ್ ಕಾಲೋನಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕುಟುಂಬಸ್ಥರೊಟ್ಟಿಗೆ ವಾಸವಾಗಿದ್ರು.
ಎಂದಿನಂತೆ ಬೆಳಗ್ಗೆ 6 ಗಂಟೆ ವೇಳೆಯಲ್ಲಿ ರಾ.ಹೆದ್ದಾರಿ 48ರ ಜಾಸ್ ಟೋಲ್ ಬಳಿಯ ಖಾಸಗಿ ಕಂಪನಿಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಲೋಹಿತ್ ನಗರದ ಮೇಲ್ಸೆತುವೆಯ ಕೆಳಗೆ ನಿಂತಿದ್ದ ಲಾರಿಗೆ ನಿಯಂತ್ರಣ ತಪ್ಪಿ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸಚಿನ್ ತಲೆಯ ಭಾಗಕ್ಕೆ ಗಂಭೀರ ಗಾಯ ಗೊಂಡು ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
20/04/2022 11:17 am