ಬೆಂಗಳೂರು: ಬೆಂಗಳೂರಿನಲ್ಲಿ ವೈದ್ಯನಿಂದ ಐಸಿಸ್ ಉಗ್ರ ಸಂಘಟನೆಗೆ ಯುವಕರ ನೇಮಕಾತಿ ಪ್ರಕರಣ ಸಂಬಂಧ ಎನ್‌ಐಎನಿಂದ ಮೂವರು ಆರೋಪಿಗಳ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಮಹಮ್ಮದ್ ತೌಖೀರ್, ಜೋಹಿಬ್ ಮನ್ನ ಹಾಗೂ ಮಹಮ್ಮದ್ ಶಿಹಬ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಬೆಂಗಳೂರಿನ ಇಬ್ಬರು ಹಾಗೂ ಉಡುಪಿಯ ಒಬ್ಬ ಆರೋಪಿ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 2020ರ ಆಗಸ್ಟ್‌ನಲ್ಲಿ ಅಬ್ದುರ್ ರೆಹಮಾನ್‌ನನ್ನು ಎನ್‌ಐಎ ಬಂಧಿಸಿತ್ತು. ಎಂ.ಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ದಂತ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಅಬ್ದುರ್ ರೆಹಮಾನ್ ಕುರಾನ್ ಸರ್ಕಲ್ ಎಂಬ ವಾಟ್ಸಾಪ್ ಗ್ರೂಪ್ ಮೂಲಕ ಐಸಿಸ್‌ಗೆ ಯುವಕರನ್ನ ಸೇರಿಸಲು ಪ್ರಚೋದಿಸುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.
ಮೂವರು ಆರೋಪಿಗಳು ವಾಟ್ಸಾಪ್ ಗ್ರೂಪನಲ್ಲಿ ಯುವಕರನ್ನು ಐಸಿಸ್ ಸೇರಿಸಲು ಪ್ರೇರೆಪಿಸುತ್ತಿದ್ದರು. ಫಂಡಿಂಗ್ ಸಂಗ್ರಹಣೆಗಾಗಿ ಸಿರಿಯಾಗೆ ಆರೋಪಿಗಳು ಭೇಟಿಯಾಗಿದ್ದು ತನಿಖೆಯಲ್ಲಿ ಸಾಬೀತಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಎರಡು ಬಾರಿ ಚಾರ್ಜ್ ಶೀಟ್ ಸಲ್ಲಿಸಿರುವ ಎನ್ಐಎ ಈಗ ಆರೋಪಿಗಳ ವಿರುದ್ಧ ಮತ್ತೊಂದು ಪೂರಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
Kshetra Samachara
16/04/2022 09:51 pm