ಬೆಂಗಳೂರು: ಬೆಂಗಳೂರು ವಲಯದ ಎನ್ ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವ್ಯವಸ್ಥಿತವಾಗಿ ಲಕ್ನೋ - ಬೆಂಗಳೂರು ನಡುವೆ ನಡೆಯುತ್ತಿದ್ದ ಹ್ಯಾಶಿಶ್ ಆಯಿಲ್ ಸ್ಮಗ್ಲಿಂಗ್ ನ ಬ್ರೇಕ್ ಮಾಡಿದ್ದಾರೆ. ಲಕ್ನೋದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಹ್ಯಾಶಿಶ್ ಆಯಿಲ್ ಸೀಜ್ ಮಾಡಿರೋ ಎನ್ ಸಿಬಿ ಅಧಿಕಾರಿಗಳು,ಉತ್ತರ ಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಏಳು ಲಕ್ಷ ಮೌಲ್ಯದ 3.16 ಕೆ.ಜಿ ಹ್ಯಾಶಿಶ್ ಆಯಿಲ್ ಸೀಜ್ ಮಾಡಿದ್ದಾರೆ. ನೇಪಾಳ ಮೂಲದ ವ್ಯಕ್ತಿಯಿಂದ ಹ್ಯಾಶಿಶ್ ಆಯಿಲ್ ಖರೀದಿಸುತ್ತಿದ್ದ ಆರೋಪಿಗಳು, ಬ್ಯಾಗಿನಲ್ಲಿ ಬಟ್ಟೆಗಳ ನಡುವೆ ಇಟ್ಟು ನಗರಕ್ಕೆ ತರ್ತಿದ್ರು. ಬಳಿಕ ಬೆಂಗಳೂರು ಮೂಲದ ವ್ಯಕ್ತಿಗೆ ಹೋಲ್ ಸೆಲ್ ರೂಪದಲ್ಲಿ ಮಾರಾಟ ಮಾಡ್ತಿದ್ರು. ಪಕ್ಕ ಮಾಹಿತಿ ಪಡೆದು ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನ ಓರ್ವ ರಿಸೀವರ್ ನನ್ನು ಬಂಧಿಸಿರೋದಾಗಿ ಬೆಂಗಳೂರು ಎನ್ ಸಿಬಿ ಮುಖ್ಯಸ್ಥ ಗವಾಟೆ ತಿಳಿಸಿದ್ದಾರೆ.
PublicNext
14/04/2022 02:26 pm