ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್
ಬೆಂಗಳೂರು: 8 ದಿನಗಳ ಹಿಂದೆ ʼಪಬ್ಲಿಕ್ ನೆಕ್ಸ್ಟ್ʼ OYE ಹಗರಣದ ಬಗ್ಗೆ ವರದಿ ಮಾಡಿದ್ದು, ಸಿಸಿಬಿ ಪೊಲೀಸರು ಇದೀಗ ಅವರನ್ನು ಬಂಧಿಸಿದ್ದಾರೆ. OYE space ನಿಂದ ವಂಚನೆಗೊಳಗಾದ ಜನರಿಂದ ದೂರು ಕೂಡ ದಾಖಲಾಗಿತ್ತು. ಒಂದೇ ವಾರದಲ್ಲಿ ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ವಿಷಯ ಗೊತ್ತಾಗಿ ಸಿಸಿಬಿ ಕಚೇರಿ, ಠಾಣೆಗೆ ಮೋಸಕ್ಕೆ ಒಳಗಾದ ಜನರು ದೌಡಾಯಿಸಿದರು.
OYE ವಂಚಕರ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯಲ್ಲಿ FIR ಕೂಡ ದಾಖಲಾಗಿತ್ತು. ಸಿಸಿಬಿ ಪೊಲೀಸರೂ ಎಫ್‌ಐಆರ್ ದಾಖಲಿಸಿದ್ದು, ಇದೀಗ ಪೊಲೀಸರು ಅವರನ್ನು ಬಂಧಿಸಿದ್ದಾರೆ. Ceo ಸುನಿಲ್ ಮೊರೆ ಹಾಗೂ ಮ್ಯಾನೇಜರ್ ಶಿವಕುಮಾರ್ ಬಂಧಿತರು.
OYE space ಮೋಸಗಾರರು ಮನೆ ಬೇಕಾದ ಜನರಿಗೆ ಹಾಗೂ ಮನೆ ಮಾಲೀಕರಿಗೆ ಮಧ್ಯವರ್ತಿಗಳಾಗಿ ಕೆಲಸ ಮಾಡ್ತಿದ್ರು. ಮೊದಲು ಮನೆಗಳ ಮಾಲೀಕರಿಂದ ಬಾಡಿಗೆಗಾಗಿ ಮನೆಗಳನ್ನು ಪಡೆದು, ಈ ಮನೆಗಳನ್ನು ಬೇರೆ ಜನರಿಗೆ ಲಕ್ಷಾಂತರ ರೂ.ಗೆ ಲೀಸ್ ಗೆ ನೀಡುತ್ತಿದ್ದರು. ಹೀಗೆ ಜನರಿಂದ ಕೋಟ್ಯಂತರ ರೂ.ಗಳನ್ನು OYE space ಬಾಚಿತ್ತು. ಮೋಸ ಹೋದ ಜನರೆಲ್ಲ ಈಗ ತಮ್ಮ ಹಣವನ್ನು ಮರಳಿ ಪಡೆಯುವ ಭರವಸೆಯಲ್ಲಿದ್ದಾರೆ.
- ನವೀನ್, ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
09/04/2022 09:37 pm