ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡ್ತಿದ್ದ ಆರೋಪಿಗಳು ಸಿಸಿಬಿ ಬಲೆಗೆ

ಬೆಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ‌ ನಡೆಸಿ ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧಿಸಿದ್ದಾರೆ.

ಆಸಿಫ್ ಹುಸೇನ್, ಅಪ್ಸರ್ ಅಹಮ್ಮದ್,ಅಸ್ಗರ್ ಮಾದಿ ಹಾಗೂ ತೌಸಿಫ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಏರಿಯಾಗಳಲ್ಲಿ ರೌಂಡ್ಸ್ ಹೊಡೆದು ಮೊದಲು ಏರಿಯಾ ಸಮೀಕ್ಷೆ ಮಾಡ್ತಿದ್ದರು. ಯಾವ ರಸ್ತೆಯಲ್ಲಿ ಚೈನ್ ಕಿತ್ರೆ ಈಸಿಯಾಗಿ ಎಸ್ಕೇಪ್ ಆಗಬಹುದು ಎಂದು ಪ್ಲಾನ್ ಮಾಡ್ತಿದ್ದ ಇವ್ರು, ಸರಗಳ್ಳತನಕ್ಕೆ ಪಲ್ಸರ್ ಬೈಕ್ ಹಾಗೂ ಡಿಯೋ ಬೈಕ್ ಬಳಸುತ್ತಿದ್ರು.

ಸೂಕ್ತ ಮಾಹಿತಿ ಪಡೆದು ಆರೋಪಿಗಳನ್ನ ಸಿಸಿಬಿ ಇನ್ಸ್ಪೆಕ್ಟರ್ ಹಜರೇಶ್ ಆಂಡ್ ಟೀಂ ಸರಗಳ್ಳರನ್ನು ಬಂಧಿಸಿ ಹತ್ತಕ್ಕೂ ಹೆಚ್ಚು ಪ್ರಕರಣಗಳನ್ನ ಪತ್ತೆ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 25 ಲಕ್ಷ ಬೆಲೆ ಬಾಳುವ 490 ಗ್ರಾಂ ಚಿನ್ನವನ್ನು ಸೀಜ್ ಮಾಡಿ ತನಿಖೆ ಮುಂದುವರಿಸಿದ್ದಾರೆ

Edited By : Shivu K
PublicNext

PublicNext

08/04/2022 08:42 am

Cinque Terre

40.61 K

Cinque Terre

5

ಸಂಬಂಧಿತ ಸುದ್ದಿ