ಕೆಂಗೇರಿ: ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗಿದ್ರಿಂದ ಶಾಲಾ ಕಾಲೇಜುಗಳಲ್ಲಿ ಸಾರಿಗೆ ಶುಲ್ಕ ಜಾಸ್ತಿ ಮಾಡಿದ್ದಾರಂತೆ. ಇಷ್ಟು ದಿನಗಳ ಕಾಲ ದಿನನಿತ್ಯ ತೈಲದ ಬೆಲೆ ಏರುತ್ತಿದ್ದು, ಇದ್ರಿಂದ ವಾಹನ ಸವಾರರು ನಲುಗುತಿದ್ರು. ಆದ್ರೆ ಈಗ ಈ ಬಿಸಿ ಶಾಲೆ ಮತ್ತು ಕಾಲೇಜಿನ ಮಕ್ಕಳ ಪೋಷಕರಿಗೆ ಶಾಕ್ ನೀಡಿದೆ.
ಇನ್ನೂ ಯಾಕೆ ಶಾಲಾ ಸಾರಿಗೆ ಶುಲ್ಕ ಜಾಸ್ತಿ ಮಾಡಿದ್ದೀರಾ ಅಂತ ಕೇಳಿದ್ರೆ, ಶಾಲಾ ಪ್ರಾಂಶುಪಾಲರು "ನಾವೇನ್ ಮಾಡೋಣ ಡೀಸೆಲ್ ದರ ಜಾಸ್ತಿ ಆಗಿದೆ. ಹೀಗಾಗಿ ಹೆಚ್ಚು ಮಾಡ್ತಿದ್ದೇವೆ" ಅನ್ನುತಿದ್ದಾರಂತೆ. ಹಾಗಾದ್ರೆ ದುಡಿದು, ಮಕ್ಕಳ ಸಾಕಿ, ಓದಿಸುತ್ತಾ, ಗಗನಕ್ಕೇರಿರುವ ವಸ್ತುಗಳನ್ನ ಕೊಂಡು ತಿಂದು, ಉಳಿಸೋದು ಎಲ್ಲಿ ? ಈ ದುಬಾರಿ ದುನಿಯಾದಲ್ಲಿ ಬದುಕೋದು ಹೇಗೆ ಎಂಬ ಯೋಚನೆಯಲ್ಲಿ ಪೋಷಕರು ಮುಳುಗಿದ್ದಾರೆ.
Kshetra Samachara
08/04/2022 08:37 am