ಕೆಆರ್ ಪುರ: ತಡರಾತ್ರಿ ತೆಂಗಿನಕಾಯಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಸುಮಾರು 70,000 ರೂ. ಹಣ ದೋಚಿ ಪರಾರಿಯಾಗಿರುವ ಘಟನೆ ವೈಟ್ ಫೀಲ್ಡ್ ವಿಭಾಗದ ಕೆಆರ್ ಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಕೆಆರ್ ಪುರದ ಓಲ್ಡ್ ಪೊಲೀಸ್ ಠಾಣೆಯ ರಸ್ತೆಯಲ್ಲಿರುವ ಶ್ರೀ ವಿನಾಯಕ ತೆಂಗಿನಕಾಯಿ ಅಂಗಡಿವೊಂದಕ್ಕೆ ಮಧ್ಯರಾತ್ರಿ ನುಗ್ಗಿದ ಕಳ್ಳರು ಸುಮಾರು 70,000 ರೂ ಹಣವನ್ನು ದೋಚಿದ್ದಾರೆ...ಎಂದಿನಂತೆ ಅಂಗಡಿ ಮಾಲೀಕರು ಬೆಳಿಗ್ಗೆ ಅಂಗಡಿ ಓಪನ್ ಮಾಡಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ... ನಿನ್ನೆ ತಡರಾತ್ರಿ ಸುಮಾರು 1.30 ರ ಸಮಯದಲ್ಲಿ ಅಂಗಡಿಯ ಮೇಲ್ಛಾವಣಿಯಿಂದ ಅಂಗಡಿಗೆ ನುಗ್ಗುವ ದೃಶ್ಯಗಳು ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿವೆ.. ಒಳಗೆ ನುಗ್ಗಿದ ಕಳ್ಳರು ಸಿಸಿ ಕ್ಯಾಮೆರಾವನ್ನು ಪಕ್ಕಕ್ಕೆ ಸರಿಸಿ ಡ್ರಾದಲ್ಲಿದ್ದ ಹಣವನ್ನು ದೋಚಿದ್ದಾರೆ...
PublicNext
30/03/2022 08:01 pm