ಗಂಡನೇ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿ ತಾನು ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಯಡವನಹಳ್ಳಿ ಬಳಿ ನಡೆದಿದೆ. ಪತ್ನಿ ಲಾವಣ್ಯ (30) ಮೃತಪಟ್ಟ ದುರ್ದೈವಿ. ಕತ್ತು ಕುಯ್ದುಕೊಂಡಿರುವ ಪತಿ ಸಂಪತ್, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ, ಕಳೆದ ಹತ್ತು ದಿನಗಳಿಂದ ಲಾವಣ್ಯ ಹಾಗೂ ಸಂಪತ್ ನಡುವೆ ಜಗಳ ನಡೆಯುತ್ತಿತ್ತು.ನಿನ್ನೆ ಪತ್ನಿ ಮನೆಯವರು ಬಂದು ನ್ಯಾಯ ಮಾಡಿದ್ದರು. ಕುಡಿದು ಪದೇ ಪದೇ ಗಲಾಟೆ ಮಾಡುತ್ತಿದ್ದನಂತೆ. ಹೆಂಡತಿ ಮನೆಯಲ್ಲಿ ಮಲಗಿದ್ದಾಗ ಚಾಕು ತಂದು ಕತ್ತು ಕೊಯ್ದು ಕೊಲೆ ಮಾಡಿರಬಹುದೆಂದು ಪೊಲೀಸರು ಕೂಡ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಘಟನೆ ಸಂದರ್ಭದಲ್ಲಿ ಅಡ್ಡ ಬಂದ ಹತ್ತು ವರ್ಷದ ಮಗನಿಗೂ ಚಾಕುವಿನಿಂದ ಇರಿದು, ಬಳಿಕ ತಾನೂ ಕತ್ತು ಕುಯ್ದುಕೊಂಡಿದ್ದಾನೆ. ಮನೆಯಿಂದ ಹೊರಗಡೆ ಬಂದು ಮನೆಯ ಎದುರಿನ ಚರಂಡಿ ಬಳಿ ಬಿದ್ದು ಒದ್ದಾಡುತ್ತಿದ್ದನು. ಆಗ ಸಂಪತ್ ನನ್ನ ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ ಕತ್ತು ಕುಯ್ದುಕೊಂಡಿರುವ ಸಂಪತ್ ಸದ್ಯ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/03/2022 12:43 pm