ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗನ್ ತೋರಿಸಿ ದರೋಡೆಗೆ ಯತ್ನಿಸಿದವನಿಗೆ ಬಿತ್ತು ಧರ್ಮದೇಟು !

ಬೆಂಗಳೂರು: ಹಾಡಹಗಲೇ ಗನ್‌ ತೋರಿಸಿ ದರೋಡೆಗೆ ಯತ್ನಿಸಿರುವ ಘಟನೆ ನಗರದ ಯಾಶವಂತಪುರದಲ್ಲಿ ನಡೆದಿದೆ‌.

ಇಂದು ಮಧ್ಯಾಹ್ನ ಯಶವಂತಪುರದ ಬಾಂಬೆ ಡೈಯಿಂಗ್ ರಸ್ತೆಯ ಮನೆಯೊಂದರಲ್ಲಿ ಈ ಕೃತ್ಯ ನಡೆದಿದೆ.ಇಂಡಿಯನ್‌ ಪೆಟ್ರೋಲ್ ಬಂಕ್ ಬಳಿ ಮನೆಯೊಂದಕ್ಕೆ ಏಕಾಏಕಿ ಮೂವರು ಕಳ್ಳರು ನುಗ್ಗಿದ್ದಾರೆ. ಮನೆಯವರಿಗೆ ಗನ್ ತೋರಿಸಿ ಬೆದರಿಸಿದ್ದಾರೆ.

ಮನೆಯಲ್ಲಿದ್ದ ಇಬ್ಬರು ವೃದ್ದೆಯರು ಹಾಗೂ ಓರ್ವ ಯುವತಿಯನ್ನ ಹೆದರಿಸಿ ಬಳಿಕ ಮನೆಯಲ್ಲಿದ್ದ ಮೂರು ಜ್ಯೂವೆಲ್ಲರ್ಸ್ ಬಾಕ್ಸ್ ಕದ್ದು ಪರಾರಿಯಾಗಲು ಯತ್ನಿಸುವಾಗ ಮನೆಯವರು ಕಿರುಚಾಡಿದ್ದಾರೆ‌. ಕೂಗಾಟ ಕೇಳಿ ನೆರೆಹೊರೆ ಮನೆಯವರು ಸ್ಥಳಕ್ಕೆ ಧಾವಿಸಿದ್ದಾರೆ.‌ ಸಿಕ್ಕಿ ಬೀಳುವ ಆತಂಕದಿಂದ ಕೈಯಲ್ಲಿದ್ದ ಚಿನ್ನಾಭರಣ ಬಿಟ್ಟು ಎಸ್ಕೇಪ್‌ ಆಗಿದ್ದಾರೆ. ಈ ಪೈಕಿ ಓರ್ವ ಸಿಕ್ಕಿಬಿದ್ದಿದ್ದಾನೆ.‌ ಈ ವೇಳೆ ಸ್ಥಳೀಯರು ಆರೋಪಿಗೆ ಥಳಿಸಿ ಯಶವಂತಪುರ ಪೊಲೀಸ್ರಿಗೆ ಒಪ್ಪಿಸಿದ್ದಾರೆ.

Edited By :
Kshetra Samachara

Kshetra Samachara

15/03/2022 06:59 pm

Cinque Terre

3.14 K

Cinque Terre

1

ಸಂಬಂಧಿತ ಸುದ್ದಿ