ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಹರ್ಷ ಹತ್ಯೆ ವಿರೋಧಿಸಿ ಹಿಂಜಾವೇ, ಭಜರಂಗ ದಳ ಹೆದ್ದಾರಿ ತಡೆ

ನೆಲಮಂಗಲ: ಶಿವಮೊಗ್ಗದಲ್ಲಿ ಭಜರಂಗ ದಳ ಕಾರ್ಯಕರ್ತ ಹರ್ಷ ಅವರ ಹತ್ಯೆ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಮತ್ತು ಭಜರಂಗದಳ ಕಾರ್ಯಕರ್ತರು ಕೆಲಹೊತ್ತು ನೆಲಮಂಗಲ ನಗರದ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು.

ಈ ಮಧ್ಯೆ ವಿಷಯ ತಿಳಿದ ನೆಲಮಂಗಲ ನಗರ ಪೊಲೀಸ್ರು ಧಾವಿಸಿ ರಸ್ತೆತಡೆ ಮಾಡದಂತೆ ವಿರೋಧಿಸಿದರು. ಬಳಿಕ ತಾಲ್ಲೂಕು ಕಚೇರಿ ಆವರಣದ ಬಳಿ ಹರ್ಷ ಅವರ ಭಾವಚಿತ್ರವಿರಿಸಿ ಆತ್ಮಕ್ಕೆ ಶಾಂತಿ ಕೋರಿದ ಕಾರ್ಯಕರ್ತರು,

ಪಿಎಫ್ಐ, ಎಸ್ಡಿಪಿಐಯನ್ನು ಬ್ಯಾನ್ ಮಾಡಬೇಕು. ಕೃತ್ಯವೆಸಗಿದ ಆರೋಪಿಗಳನ್ನು ಆರಕ್ಷಕರು ಬಂಧಿಸುವುದಷ್ಟೇ ಅಲ್ಲ, ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕ್ರೂರಿ ಕೊಲೆಗಡುಕರಿಗೆಗೆ ಮರಣದಂಡನೆ ವಿಧಿಸಬೇಕು, ಸರ್ಕಾರ ಹರ್ಷ ಕುಟುಂಬಕ್ಕೆ‌ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ಇಂತಹ ಹೀನ ಕೃತ್ಯ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಉಪತಹಶೀಲ್ದಾರ್‌ ಗೆ ಮನವಿ ಸಲ್ಲಿಸಲಾಯಿತು. ಮತ್ತೆ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದರು.

Edited By : Manjunath H D
Kshetra Samachara

Kshetra Samachara

21/02/2022 07:21 pm

Cinque Terre

3.77 K

Cinque Terre

0

ಸಂಬಂಧಿತ ಸುದ್ದಿ