ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಟಿಯಲ್ಲಿ ಬೈಕ್ ಕದ್ದು, ಹಳ್ಳಿಗಳಲ್ಲಿ ಮಾರ್ತಿದ್ದ ಕಳ್ಳ ಅರೆಸ್ಟ್

ಬೆಂಗಳೂರು: ನಗರದಲ್ಲಿ ಬೈಕ್ ಕದ್ದು ಹಳ್ಳಿಗಾಡಿನ ರೈತರಿಗೆ ಮಾರುತ್ತಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸ್ರು ಬಂಧಿಸಿದ್ದಾರೆ.ಬಂಧಿತನಿಂದ 6. 70 ಲಕ್ಷ ಮೌಲ್ಯದ ಬೈಕ್ ಸೀಜ್ ಮಾಡಿದ್ದಾರೆ.

ಚಿಂತಾಮಣಿಯ ವೆಂಕಟರಮಣ ಬಂಧಿತ ಬೈಕ್ ಚೋರನಾಗಿದ್ದು, ಬಂಧಿತನ ವಿರುದ್ಧ 40 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಇತ್ತಿಚೇಗಷ್ಟೆ ಜೈಲಿ ನಿಂದ ಬೇಲ್ ಮೇಲೆ ಹೊರ ಬಂದು ಮತ್ತೆ‌ ಹಳೆ ಚಾಳಿ ಮುಂದುವರಿಸಿದ್ದು ಕ್ಷಣ ಮಾತ್ರದಲ್ಲೆ ಬೈಕ್ ಹ್ಯಾಂಡಲ್ ಮುರಿಯುತ್ತಿದ್ದ ಆರೋಪಿ, ಕೆ.ಆರ್.ಪುರಂ, ಜ್ಞಾನಭಾರತಿ, ಬ್ಯಾಟರಾಯನಪುರ ಸೇರಿದಂತೆ 10 ಕ್ಕೂ ಹೆಚ್ಚು ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆಸಿದ್ದಾನೆ.

ಕೆಂಗೇರಿ ಪೊಲೀಸರಿಂದ ಬೈಕ್ ಕಳ್ಳನ ಸೆರೆಯಾಗಿದ್ದು, ಗಸ್ತಿನಲ್ಲಿರುವಾಗ ಅನುಮಾನಸ್ಪದವಾಗಿ ಓಡಾಡುತ್ತಿದ್ದ ವೆಂಕಟೇಶ್ ನ ವಿಚಾರಣೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

Edited By :
PublicNext

PublicNext

21/02/2022 12:49 pm

Cinque Terre

16.97 K

Cinque Terre

0

ಸಂಬಂಧಿತ ಸುದ್ದಿ