ನೆಲಮಂಗಲ: ತಡರಾತ್ರಿ ಮಾದನಾಯಕನಹಳ್ಳಿ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ಮಾಡಿ ಹುಟ್ಟು ಹಬ್ಬದ ನೆಪದಲ್ಲಿ ಜೂಜಾಟ ಆಡುತ್ತಿದ್ದ ಜೂಜುಕೋರರನ್ನು ಬಂಧಿಸಿದ್ದಾರೆ.
ಬೆಂ.ಉತ್ತರ ತಾಲ್ಲೂಕು ಹುಸ್ಕೂರು ರಸ್ತೆಯ ಕಣ್ವ ಲೇಔಟ್ ನಲ್ಲಿ ಮಾದನಾಯಕನಹಳ್ಳಿ ಠಾಣಾ ಇನ್ಸ್ ಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂದಿಗಳಿಂದ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ 13 ಮಂದಿ ಜೂಜುಕೋರರಿಂದ 1.25 ಲಕ್ಷ ನಗದು, 4 ಬೈಕ್ ಜಪ್ತಿ ಮಾಡಿದ್ದಾರೆ.
ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/02/2022 05:34 pm