ಬೆಂಗಳೂರು: ಸೇಡಂನ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಗೆ ಬ್ಲಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸರು ನಾಳೆ ವಿಚಾರಣೆ ಹಾಜರಾಗುವಂತೆ ಮಹಿಳೆಗೆ ನೋಟಿಸ್ ಜಾರಿ ಮಾಡಿದ್ದಾರೆ.
ಬ್ಲಾಕ್ ಮೇಲ್ ಪ್ರಕರಣ ಸಂಬಂಧ ಮಹಿಳೆ ಪರ ವಕೀಲ ಜಗದೀಶ್ ಮಾತನಾಡಿ, ನನ್ನ ಕಕ್ಷಿದಾರರು ಇಂದು ಬೆಳಗ್ಗೆ ಶಾಸಕರ ವಿರುದ್ಧ ಹಾಗೂ ಪೊಲೀಸರ ವರ್ತನೆ ಬಗ್ಗೆ ಆರೋಪಿಸಿದ್ದರು. ಈ ಬಗ್ಗೆ ಮಾಹಿತಿ ಪಡೆಯುವುದಕ್ಕೆ ಠಾಣೆಗೆ ಬಂದಿದ್ದೇನೆ. ಪೊಲೀಸರಿಂದ ಸಣ್ಣ-ಪುಟ್ಟ ತಪ್ಪುಗಳಾಗಿವೆ.
ಒಂದು ಮೊಬೈಲ್ ವಶಪಡೆಸಿಕೊಂಡಿದ್ದರು ಎಂಬುವುದು ಗೊತ್ತಾಗಿದೆ. ನಿನ್ನೆ ಬೆಳಗ್ಗೆ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ನಾಳೆ ಶಾಸಕರ ವಿರುದ್ಧ ನ್ಯಾಯಾಲಯದಲ್ಲಿ ನಾಳೆ ಮಧ್ಯಾಹ್ನ 3 ಖಾಸಗಿ ದೂರು (ಪಿಸಿಆರ್) ನೀಡುತ್ತೇವೆ.
ಇದಕ್ಕೂ ಮುನ್ನ ನಾಳೆ ಮಧ್ಯಾಹ್ನ 12 ಗಂಟೆಗೆ ನನ್ನ ಕಕ್ಷಿದಾರರನ್ನ ವಿಚಾರಣೆಗಾಗಿ ಪೊಲೀಸರು ಕರೆದಿದ್ದಾರೆ. ವ್ಯಾಟ್ಸಾಪ್ ಮೂಲಕ ಮಹಿಳೆಗೆ ನೋಟಿಸ್ ಕಳಿಸಿದ್ದಾರೆ. ಬೆಳಗ್ಗೆ ನನ್ನ ಕಕ್ಷಿದಾರರು ವಿಚಾರಣೆಗೆ ಬಂದು ಹಾಜರಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
Kshetra Samachara
07/02/2022 08:59 pm