ಬೆಂಗಳೂರು : ತನ್ನ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಅನುಮಾನಿಸಿದ ಪಾಪಿ ಪತಿ ಆಕೆಯ ಮೇಲೆ ಬಿಸಿ ಎಣ್ಣೆ ಸುರಿದು ಪೈಶಾಚಿಕ ಕೃತ್ಯ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆಡುಗೋಡಿಯ ಎಲ್.ಆರ್ ನಗರದ ನಿವಾಸಿಯಾಗಿರುವ ಥಾಮಸ್ ತನ್ನ ಹೆಂಡತಿ ಅಂಥೋಣಿಯ ಮೇಲೆ ಕುದಿಯವ ಎಣ್ಣೆ ಸುರಿದು ವಿಕೃತಿ ಮೇರೆದಿದ್ದ. ಈ ಬಗ್ಗೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ಥಾಮಸ್ ನನ್ನ ಪೊಲೀಸ್ರು ಬಂಧಿಸಿದ್ದಾರೆ.
ಘಟನೆಯಲ್ಲಿ ಅಂಥೋಣಿಯಗೆ ಗಂಭೀರ ಗಾಯವಾಗಿದ್ದು ಹೆಂಡ್ತಿ ಮೇಲೆ ಎಣ್ಣೆ ಎರಚುವಾಗ ತಡೆಯಲು ಬಂದ 14 ವರ್ಷದ ಮಗಳ ಮೇಲೆಯೂ ಎಣ್ಣೆ ಸುರಿದಿದ್ದಾನೆ. ಆಕೆಗೂ ಸಣ್ಣ ಪುಟ್ಟಗಾಯಗಳಾಗಿವೆ.
ಇನ್ನು ಕುಡಿಯುವ ಚಟ ಅಂಟಿಸಿಕೊಂಡಿದ್ದ ಥಾಮಸ್ ಎಲ್.ಆರ್.ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ತನ್ನ ಪತ್ನಿ ಪರ ಪರಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ.
ಕಳೆದ ಕೆಲ ದಿನಗಳಕ ಹಿಂದೆ ಹೆಂಡತಿ ಮೊಬೈಲ್ ಗೆ ಅನೌನ್ ಫೋನ್ ಕಾಲ್ ಕೂಡ ಬಂದಿತ್ತು ಇದಕ್ಕೆ
ಕಳೆದ ಜನವರಿ 30 ರಂದು ಥಾಮಸ್ ಹೆಂಡ್ತಿ ಮೇಲೆ ಕೋಲಿನಿಂದ ಹೊಡೆದು ಚಿತ್ರಹಿಂಸೆ ನೀಡಿ ಪ್ರಜ್ಞೆ ತಪ್ಪಿಸಿದ್ದ. ನಂತರ ಸ್ನಾನ ಮಾಡಲು ನೀರು ಕಾಯಿಸುವುದಾಗಿ ಹೇಳಿ ಅಡುಗೆ ಮನೆಗೆ ಹೋಗಿದ್ದ ಥಾಮಸ್,ಅಲ್ಲೇ ಇದ್ದ ಎಣ್ಣೆಯನ್ನು ಕುದಿಸಿದ್ದಾನೆ. ಬಳಿಕ ಬಿಸಿ ಎಣ್ಣೆಯನ್ನು ಹೆಂಡ್ತಿಯ ಮುಖ ಎದೆ ಭಾಗಕ್ಕೆ ಸುರಿದು ವಿಕೃತಿ ಮೆರೆದಿದ್ದಾನೆ.
ಸದ್ಯ ಅಂಥೋಣಿಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
PublicNext
03/02/2022 07:15 pm