ನೆಲಮಂಗಲ: ಹೆದ್ದಾರಿ, ಕಾಲೇಜುಗಳ ಬಳಿ ಅಕ್ರಮ ಗಾಂಜಾ ಮಾರಾಟ ಮಾಡಲು ಹೊಂಚು ಹಾಕ್ತಿದ್ದ ಮೂವರು ಗಾಂಜಾ ಪೆಡ್ಲರ್‌ಗಳನ್ನ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸ್ರು ಬಂಧಿಸಿದ್ದಾರೆ.
ನೆಲಮಂಗಲ ತಾಲೂಕು ತಿಪ್ಪಗೊಂಡನಹಳ್ಳಿ ಸೌಂದರ್ಯ ಕಾಲೇಜು ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೆಂಗಳೂರು ನಂದಿನಿ ಲೇಔಟ್ನ ರಂಜಿತ್, ನೆಲಮಂಗಲ ರೇಣುಕಾ ನಗರದ ಅಕ್ರಂ ಪಾಷಾ, ತಾಲೂಕಿನ ಕುಲುವನಹಳ್ಳಿಯ ಉಮೇಶ
ಎಂಬಾತರನ್ನ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಸುಮಾರು 48.700 ಮೌಲ್ಯದ 950 ಗ್ರಾಂ ಗಾಂಜಾ ಜಪ್ತಿ ಮಾಡಿ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸ್ರು ಬಂಧಿತ ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.
PublicNext
29/01/2022 11:43 am