ಬೆಂಗಳೂರು: ಬೆಳೆದ ಬೆಳೆಗೆ ದನಗಳನ್ನು ಮೇಯಿಸಲು ಬಿಟ್ಟಿದ್ದಿಯಾ ಇದು ಸರಿನಾ ಅಂತ ಪ್ರಶ್ನಿಸಿದ ವೃದ್ಧೆ. ಅಷ್ಟೇ ಅದೇ ತಪ್ಪಾಗೋಯ್ತು ನೋಡ್ರಿ, ಇಲ್ಲೊಬ್ಬ ಆಸಾಮಿ ಆಕೆಯ ಕೈಯಲ್ಲಿದ್ದ ಕುಡಗೋಲನ್ನು ಕಸಿದುಕೊಂಡು ಆಕೆಯ ಎಡಗೈಗೆ ಹಲ್ಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೈಗೆ ಬ್ಯಾಂಡೇಜ್ ಸುತ್ತಿಕೊಂಡಿರುವ ಮಹಿಳೆ ಹೆಸರು ಚಲುವಮ್ಮ ಅಂತ. ಇನ್ನು ಈ ಕೃತ್ಯಕ್ಕೆ ಕಾರಣವಾದ ಆರೋಪಿ ಹಾರೋಹಳ್ಳಿಯ ನಿವಾಸಿ ನಾಗರಾಜು ಅಂತ.
ಗಾಯಾಳು ಚಲುವಮ್ಮ ಇಂದು ಮಧ್ಯಾಹ್ನ ಸುಮಾರಿಗೆ ತಮ್ಮ ಜಮೀನ ಬಳಿ ಹೋಗಿ ನೋಡಿದಾಗ ತಮ್ಮ ಹೊಲದ ಪಕ್ಕದ ಜಮೀನಿನ ಮಾಲೀಕ ನಾಗರಾಜನ ದನಗಳು ಬೆಳೆಯನ್ನು ಮೇಯುತ್ತಿದ್ದವು. ನಮ್ಮ ಜಮೀನಿಗೆ ಏಕೆ ದನಗಳನ್ನು ಬಿಟ್ಟಿದ್ದಿರಾ, ಅವರೆಕಾಯಿ ಮುರಿದು ಕೊಳ್ತಿನಿ ಆಮೇಲೆ ನೀನೇ ಹಸುಗಳನ್ನು ಮೇಯಿಸಿಕೋ ಎಂದು ಹೇಳಿದ್ರು. ಆದರೆ ಪಾಪ ಮಹಿಳೆಗೆ ವಯಸ್ಸಾಗಿದೆ ಅಂತನೂ ನೋಡದೇನೆ ಜಗಳಕ್ಕೆ ಬಿದ್ದ ಆರೋಪಿ ನಾಗರಾಜು, ಈಕೆಯ ಕೈಯಿಗೆ ಕುಡಗೋಲನಿಂದ ಹಲ್ಲೆ ಮಾಡಿದ್ದಾನೆ.
ವೃದ್ಧೆ ಚಲುವಮ್ಮನ ಮೇಲೆ ಆರೋಪಿ ನಾಗರಾಜನ ತೋರಿದ ದರ್ಪ ಕಂಡ ಅಕ್ಕಪಕ್ಕದ ಜಮೀನಿನವರು, ಈಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದ ಕೋಡಲೇ ಸ್ಥಳಕ್ಕೆ ಬಂದ ಗಾಯಾಳು ಮಹಿಳೆ ಮನೆಯವರು ಈಕೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಘಟನೆ ಬಗ್ಗೆ ಸಂಪೂರ್ಣವಾಗಿ ವಿವರಿಸಿ, ನಮಗೆ ನ್ಯಾಯ ಕೊಡ್ಸಿ ಸ್ವಾಮಿ ಅಂತ ಹಾರೋಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರಿಗೆ ದೂರು ನೀಡಿದ್ದಾರೆ.
PublicNext
28/01/2022 09:50 pm