ದೇವನಹಳ್ಳಿ : ಅನಾರೋಗ್ಯದಿಂದ ಬಳಲುತ್ತಿದ್ದ ಹೆಂಡತಿ ಸಾವನ್ನಪ್ಪಿದ್ದು, ಹೆಂಡತಿ ಸಾವನಿಂದ ಮನನೊಂದ ಗಂಡ ಹೆಂಡತಿ ಸಾವಿನ ಸುದ್ದಿಯನ್ನ ಯಾರಿಗೂ ಹೇಳದೆ ನೇಣಿಗೆ ಶರಣಾಗುವ ಮೂಲಕ ಸಾವಿನಲ್ಲೂ ಒಂದಾಗಿದ್ದಾರೆ.
ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಸಿದ್ದಗಂಗಾ ಶಾಲೆಯ ಸಮೀಪ ಘಟನೆ ನಡೆದಿದ್ದು, ಹೆಂಡತಿ ಲಾವಣ್ಯ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ, ಹೆಂಡತಿ ಸಾವಿನಿಂದ ಮನನೊಂದ ಗಂಡ ವಿಜಯೇಂದ್ರ (38) ನೇಣಿಗೆ ಶರಣಾಗಿದ್ದಾನೆ.
9 ವರ್ಷಗಳ ಹಿಂದೆ ಮದುವೆಯಾಗಿದ್ದ ಇಬ್ಬರು ಬೂದಿಗ್ರಾಮದಲ್ಲಿ ವಾಸವಾಗಿದ್ದರು, ದಂಪತಿಗೆ ಮಕ್ಕಳು ಇರಲಿಲ್ಲ, ಅನಾರೋಗ್ಯದಿಂದ ಬಳಲುತ್ತಿದ್ದ ಲಾವಣ್ಯ ಇಂದು ಬೆಳಿಗ್ಗೆ ಮನೆಯಲ್ಲಿ ಸಾವನ್ನಪ್ಪಿದ್ದಾರೆ, ಹೆಂಡತಿ ಸಾವಿನಿಂದ ಮನನೊಂದ ಗಂಡ ಹೆಂಡತಿ ಸಾವನ್ನೂ ಯಾರಿಗೂ ಹೇಳದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ, ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
27/01/2022 01:58 pm