ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಮಧುರನಹೊಸಹಳ್ಳಿಯಲ್ಲಿ ಕಳ್ಳರ ಹಾವಳಿ; ಕೊಟ್ಟಿಗೆಗೆ ನುಗ್ಗಿ ಮೇಕೆ ಕಳವು, ಚಿನ್ನಾಭರಣ ಲೂಟಿ

ದೊಡ್ಡಬಳ್ಳಾಪುರ: ಮಧುರನಹೊಸಹಳ್ಳಿ ಗ್ರಾಮದಲ್ಲಿ 10 ದಿನದಲ್ಲಿ 2 ಕಳ್ಳತನ ಪ್ರಕರಣ ನಡೆದಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಜ.12ರಂದು ಹಾಡಹಗಲೇ ವೃದ್ಧೆಯ ಚಿನ್ನಾಭರಣ ಕಳ್ಳತನವಾಗಿದ್ದರೆ, ಮುಂಜಾನೆ 3ರ ಸಮಯದಲ್ಲಿ ಕೊಟ್ಟಿಗೆಯಲ್ಲಿದ್ದ 5 ಮೇಕೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಪ್ರವೀಣ್ ಕುಮಾರ್ ಅವರ ಮೇಕೆ ಕಳ್ಳತನವಾಗಿದ್ದು, ಮನೆ ಪಕ್ಕದ ಕೊಟ್ಟಿಗೆಯಲ್ಲಿ 8 ಮೇಕೆಗಳನ್ನು ಕೂಡಿಹಾಕಿ ಮನೆಯವರು ನಿದ್ದೆಗೆ ಜಾರಿದ್ದಾರೆ. ಮುಂಜಾನೆ 3 ಗಂಟೆ ವೇಳೆ ಟಾಟಾ ಏಸ್ ನಲ್ಲಿ ಬಂದಿದ್ದ ಕಳ್ಳರು ಮನೆ ಬಾಗಿಲಿಗೆ ಚಿಲಕ ಹಾಕಿ 5 ಮೇಕೆಗಳನ್ನು ಕದ್ದೊಯ್ದಿದ್ದಾರೆ. ಸಂಬಂಧಿಕರಿಗೆ ಪೋನ್ ಮಾಡಿ ಬಾಗಿಲು ತೆಗೆದು ಕೊಟ್ಟಿಗೆಗೆ ಧಾವಿಸಿ ನೋಡಿದಾಗ ಒಂದು ಲಕ್ಷ ಮೌಲ್ಯದ 5 ಮೇಕೆಗಳು ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ. ದೊಡ್ಡಬೆಳವಂಗಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜ. 12ರಂದು ಇದೇ ಗ್ರಾಮದಲ್ಲಿ ವೃದ್ಧ ಮಹಿಳೆಯ ಚಿನ್ನಾಭರಣ ದೋಚಿ ದುಷ್ಕರ್ಮಿ ಪರಾರಿಯಾಗಿದ್ದ. ಸಂಬಂಧಿಕನಂತೆ ಮಾತನಾಡಿಸುವ ನೆಪದಲ್ಲಿ ಬಂದಿದ್ದ ಈ ಖದೀಮ, ಚಾಕು ತೋರಿಸಿ ವೃದ್ಧೆಯ ಚಿನ್ನದೊಲೆ, ಗುಂಡು, ತಾಳಿ ಮತ್ತು ಮೊಬೈಲ್ ದೋಚಿದ್ದ.

Edited By : Nagesh Gaonkar
PublicNext

PublicNext

22/01/2022 04:49 pm

Cinque Terre

27.58 K

Cinque Terre

0

ಸಂಬಂಧಿತ ಸುದ್ದಿ