ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಗಾಂಜಾ ಸೇವಿಸಿದ ಪುಂಡನಿಂದ ಕಾರಿಗೆ ಬೆಂಕಿ ಹಚ್ಚುವ ವಿಫಲ ಯತ್ನ

ಬೆಂಗಳೂರು : ಗಾಂಜಾ ಮತ್ತಿನಲ್ಲಿ ಯುವಕನೋರ್ವನು ಆಡಿ ಕಾರ್ ಗೆ ಬೆಂಕಿ ಹಚ್ಚಲು ಮುಂದಾಗಿದ್ದಕ್ಕೆ ಆತನನ್ನು ಮನಬಂದಂತೆ ಥಳಸಿದ ಘಟನೆ ಬೆಂಗಳೂರು ಹೊರವಲಯ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿದರಹಳ್ಳಿಯಲ್ಲಿ ನಡೆದಿದೆ.

ಹಾಡ ಹಗಲೇ ಮುಖ್ಯರಸ್ತೆಯಲ್ಲೇ ಮಹೇಶ್ ಎಂಬಾತನಿಗೆ ಅಭಿಷೇಕ್, ನರೇಂದ್ರ ಸೇರಿದಂತೆ ನಾಲ್ಕೈದು ಮಂದಿಯಿಂದ ರಾಡ್ ಮತ್ತು ದೊಣ್ಣೆಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ನಿನ್ನೆ ಮಧ್ಯರಾತ್ರಿ ಕಾರ್ ಗೆ ಬೆಂಕಿ ಇಡಲು ಹೋಗಿ ತಪ್ಪಿಸಿಕೊಂಡು ಬಂದಿದ್ದ. ಹೀಗಾಗಿ ಮುಂಜಾನೆಯಿಂದ ಹುಡುಕುತ್ತಿದ್ದ ಯುವಕರು ಮಧ್ಯಾಹ್ನದ ವೇಳೆಗೆ ಯುವಕನನ್ನು ಹಿಡಿದು ರಾಡ್ ನಿಂದ ಹಲ್ಲೆ ಮಾಡಿದ್ದಾರೆ.

ಸದ್ಯ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Edited By : Nagesh Gaonkar
PublicNext

PublicNext

20/01/2022 09:48 pm

Cinque Terre

37 K

Cinque Terre

0

ಸಂಬಂಧಿತ ಸುದ್ದಿ