ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೀಗ ಹಾಕಿದ ಮನೆ ಇವರ ಟಾರ್ಗೆಟ್ : 12 ವರ್ಷದ ಬಳಕೆ ಕತರ್ನಾಕ್ ಗ್ಯಾಂಗ್ ಅಂದರ್

ಬೆಂಗಳೂರು: ದಿನವಿಡಿ ಏರಿಯಾ ಸರ್ವೆ ಮಾಡಿ ಮಕ್ಕಳನ್ನ ಪೋಷಕರು ಶಾಲೆಗೆ ಗೆ ಕರೆದುಕೊಂಡು ಹೋಗುವುದನ್ನು ಗಮನಿಸಿ ಆ ಮನೆ ಕೀ ನಕಲು ಮಾಡಿ ಮಾರನೇ ದಿನ ಅದೇ ಮನೆಗೆ ಕನ್ನ ಹಾಕಿ ಮನೆಯಲ್ಲಿದ್ದ ಚಿನ್ನಾಭರಣ ದೋಚುತ್ತಿದ್ದ ಗ್ಯಾಂಗ್ ನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅಚ್ಚರಿ ಅಂದ್ರೆ ಈ ಗ್ಯಾಂಗ್ ತಗಲಾಕಿಕೊಂಡಿರೋದು ಬರೋಬ್ಬರಿ 12 ವರ್ಷಗಳಬಳಿಕ ಡಿಜೆ ಸುತ್ತಾಮುತ್ತಾ ಕಳ್ಳತನ ಮಾಡಿದರೂ ಸಣ್ಣ ಸುಳಿವು ನೀಡದೆ ತಿರಗಾಡುತ್ತಿದ್ದ ಈ ಪ್ರಾಜಕ್ಟ್ ಗ್ಯಾಂಗ್ ಗೆ ನಸೀಬ್ ಕೈಕೊಟ್ಟು ಪೊಲೀಸರ ಅತಿಥಿಯಾಗಿದ್ದಾರೆ.

ಆರೋಪಿಗಳಾದ ಮುರುಳಿ, ಶಿವರಾಂ ಹಾಗೂ ಸಿರಾಜ್ ನನ್ನು ಬಂಧಿಸಿ 11 ಲಕ್ಷ ಮೌಲ್ಯದ 240 ಗ್ರಾಂ ಮೌಲ್ಯದ ಚಿನ್ನ ಹಾಗೂ ಏಳು ಲಕ್ಷ ರೂಪಾಯಿ ನಗದು ಜಪ್ತಿ ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಳ್ಳತನ ಮಾಡಲೆಂದೇ ಕೀ ಮೇಕರ್ ಬಳಿ ಕೀ ಮಾಡೋದನ್ನ ಕಲಿತಿದ್ದ ಗ್ಯಾಂಗ್ ಲೀಡರ್ ಮುರುಳಿ ಮನೆಯ ಕೀ ಯನ್ನು ನಾಲ್ಕೈದು ಮಾದರಿಯಲ್ಲಿ ನಕಲಿ ಕೀ ತಯಾರಿಸುತ್ತಿದ್ದ.

ಕಳ್ಳತನ ಕೃತ್ಯಕ್ಕೆ ಪ್ರಾಜೆಕ್ಟ್ ಎಂದು ಕೊಡ್ ವರ್ಡ್ ಬಳಸುತ್ತಿದ್ದರು. ಕದ್ದ ಚಿನ್ನಾಭರಣವನ್ನು ಪರಿಚಯಸ್ಥ ಜ್ಯೂವೆಲ್ಲರಿ ಶಾಪ್ ಗಳಿಗೆ ಮಾರಾಟ ಮಾಡಿ ಮೋಜು ಮಸ್ತಿಯ ಜೀವನ ನಡೆಸುತ್ತಿದ್ದರು ಎಂದು ನಗರ ಪೂರ್ವ ಅಪರ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

14/01/2022 06:45 pm

Cinque Terre

954

Cinque Terre

0

ಸಂಬಂಧಿತ ಸುದ್ದಿ