ಯಲಹಂಕ: ಬಿಡಿಎ ಅಧ್ಯಕ್ಷ, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಕೊಲೆಗೆ ಸ್ಕೆಚ್ ಹಾಕಿದ್ದ ಯಲಹಂಕದ ಕುಳ್ಳ ದೇವರಾಜ್ ವಿರುದ್ಧ ಇದೀಗ ಮತ್ತೊಂದು FIR ದಾಖಲಾಗಿದೆ.
ಕಳೆದ 15 ದಿನಗಳಲ್ಲೇ ರಾಜಾನುಕುಂಟೆ ನಂತರ ಇದೀಗ ಯಲಹಂಕ ಉಪನಗರ ಠಾಣೆಯಲ್ಲಿ ಜಾತಿನಿಂದನೆ ಮತ್ತು ಜೀವ ಬೆದರಿಕೆ ಕೇಸ್ ದಾಖಲಾಗಿದೆ. ಯಲಹಂಕ ಉಪನಗರದ ಕೃಷ್ಣಮೂರ್ತಿ ಅವರಿಗೆ ರಮೇಶ್ ಜೊತೆ ಸೇರಿ ಕುಳ್ಳ ದೇವರಾಜ್ ಕಳೆದ ಹತ್ತು ದಿನಗಳಿಂದ ಧಮ್ಕಿ ಹಾಕುತ್ತಿದ್ದ ಎನ್ನಲಾಗಿದೆ.
ಗುರುತು ಪರಿಚಯ ಇಲ್ಲದ ದುಷ್ಕರ್ಮಿಗಳು ನನ್ನನ್ನು ಫಾಲೋ ಮಾಡುತ್ತಿದ್ದು, ನನ್ನನ್ನು ಕೊಲೆ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಕುಳ್ಳ ದೇವರಾಜ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೃಷ್ಣಮೂರ್ತಿ FIR ನಲ್ಲಿ ಉಲ್ಲೇಖಿಸಿದ್ದಾರೆ.
ಇದೀಗ ಈ ಕುಳ್ಳನ ವಿರುದ್ಧ ಐಪಿಸಿ ಸೆಕ್ಷನ್ 506, 34, 504 ಹಾಗೂ ಎಸ್‌ಸಿ, ಎಸ್ ಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ.
ಯಲಹಂಕದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಜೊತೆ ಸೇರಿ ವಿಶ್ವನಾಥ್ ಅವರ ವಿರುದ್ಧ ಕೊಲೆಗೆ ಸ್ಕೆಚ್ ಹಾಕಿ, ಹೈ ಪ್ರೊಫೈಲ್ ಕೇಸ್ ನಿಂದ ಬಚಾವಾಗಿದ್ದ ಕುಳ್ಳ ದೇವರಾಜ್ ಗೆ ಇದೀಗ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.
Kshetra Samachara
20/12/2021 07:22 pm