ಬೆಂಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ರಾಜ್ಯದಲ್ಲಿ ಹೆಚ್ಚಾಗಿದೆ.ಇದರ ಬೆನ್ನಲ್ಲೇ ಎಬಿವಿಪಿ ಮುಖಂಡ ಹಾಗೂ ಎಬಿವಿಪಿ ಕಾರ್ಯಕರ್ತ ನಡೆಸಿರುವ ಫೋನ್ ಸಂಭಾಷಣೆ ಆಡಿಯೋ ವೈರಲ್ ಆಗಿದೆ.
ಎಬಿವಿಪಿ ಮುಖಂಡ ತನ್ನ ಕಾರ್ಯಕರ್ತಿನಿಗೆ ಕರೆ ಮಾಡಿ ಕೇಸರಿ ಶಾಲು ಹಾಕಿಕೊಂಡು ಬನ್ನಿ ಎಂದು ತಾಕೀತು ಮಾಡುತ್ತಾರೆ. ಅಲ್ಲದೆ ಬೇರೆ ವಿದ್ಯಾರ್ಥಿಗಳಿಗೂ ಸಹ ಕೇಸರಿ ಶಾಲು ಹಾಕಿಕೊಂಡು ಬರುವಂತೆ ಸಂದೇಶ ರವಾನಿಸುವಂತೆ ಸೂಚಿಸುತ್ತಾರೆ.
ಈ ಆಡಿಯೋ ಕ್ಲಿಪ್ ಈಗ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ. ಆದರೆ ಈ ಮುಖಂಡ ಹಾಗೂ ಕಾರ್ಯಕರ್ತ ಯಾರೂ ಎಂಬುದು ಇನ್ನೂ ತಿಳಿದುಬಂದಿಲ್ಲ.
PublicNext
07/02/2022 04:10 pm