ಬೆಂಗಳೂರು: ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದೊಳಗೊಂದು ಮಸೀದಿ ಸದ್ದಿಲ್ಲದೆ ತಲೆ ಎತ್ತಿದೆ. ಏನಪ್ಪ ಇದು ಆಶ್ಚರ್ಯ ! ರೈಲ್ವೆ ನಿಲ್ದಾಣದೊಳಗೆ ಮಸೀದಿ ಕಟ್ಟಲು ಅವಕಾಶ ಇದೆಯಾ !? ಪ್ಲಾಟ್ ಫಾರಂ 6ರ ರೆಸ್ಟ್ ರೂಮ್ ಅದೇಗೆ ಮುಸ್ಲಿಮರ ಪ್ರಾರ್ಥನ ಮಂದಿರ ಆಗಿದೆ! ಅಲ್ಲಿ ಎಷ್ಟು ಜನ ಪ್ರಾರ್ಥನೆ ಮಾಡ್ತಾರೆ? ಇದಕ್ಕೆ ಅವಕಾಶ ಕೊಟ್ಟಿದ್ದು ಯಾರು !? ಅಲ್ಲಿ ಪ್ರಾರ್ಥನೆ ಮಾತ್ರ ನಡೆಯುತ್ತದಾ!? ಬೇರೆ ಧರ್ಮೀಯರು ಚರ್ಚ್ ಮಾಡಿಕೊಳ್ತೇವೆ, ದೇವಸ್ಥಾನ ಮಾಡಿಕೊಳ್ತೇವೆ ಎಂದರೆ ಅವಕಾಶ ಇದೆಯಾ!!??
ಈ ಬಗ್ಗೆ ಕೇರಳದ ಒಬ್ಬ ವ್ಯಕ್ತಿ ಬೆಂಗಳೂರಿನ ಪ್ಲಾಟ್ ಫಾರಂ 6ರ ಮಸೀದಿ ಬಳಿ ಮಾಡಿರುವ ವಾಯ್ಸ್ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ಕುರಿತು ರೈಲ್ವೆ ನಿಲ್ದಾಣದ ಮ್ಯಾನೇಜ್ಮೆಂಟ್ ಏನೇಳುತ್ತೆ.!? ಇದು ತಾತ್ಕಾಲಿಕ ವ್ಯವಸ್ಥೆ. ಈ ರೀತಿ ಅವಕಾಶ ಕೊಡಲು ಕಾನೂನಿನಡಿ ಸಾಧ್ಯತೆಗಳಿವೆಯಾ!? ಎನ್ನುವುದರ ಬಗ್ಗೆ ತನಿಖೆ ನಡೆಯಬೇಕಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯಬೇಕಿದೆ.
PublicNext
31/01/2022 11:22 am